ಚಾಮರಾಜನಗರ : ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಧಾಮದಲ್ಲಿ 5 ಹುಲಿಗಳನ್ನು ವಿಷ ಹಾಕಿ ಕೊಂದಿದ್ದ ಪ್ರಕರಣ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘಟನೆ ನಡೆದಿದ್ದು, ಅನುಮಾನಾಸ್ಪದ ರೀತಿಯಲ್ಲಿ ಚಿರತೆಯ ಕಳೆಬರ ಪತ್ತೆಯಾಗಿದೆ. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಬಳಿ ಚಿರತೆಯ ಶವ ಪತ್ತೆಯಾಗಿದೆ.
ಹೌದು ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಬಳಿ ಚಿರತೆಯ ಶವ ಪತ್ತೆಯಾಗಿದ್ದು, ಈ ಕುರಿತು ಬಿಳಿಗಿರಿ ರಿಸರ್ವ್ ಫಾರೆಸ್ಟ್ ಮುಖ್ಯಸ್ಥ ಶ್ರೀಪತಿ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಚಿರತೆಗೆ ವಿಷ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿದ್ದು ಚಿರತೆಯ ಸಾವಿನ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಕಳೆಬರದ ಪಕ್ಕದಲ್ಲಿ ನಾಯಿ ಮತ್ತು ಕರುವಿನ ಶವ ಪತ್ತೆಯಾಗಿದೆ. ಹಾಗಾಗಿ ಚಿರತೆಗೆ ವಿಷ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಚಿರತೆ ನಾಯಿ ಹಾಗೂ ಕರುವಿನ ಕಲೆ ಬರೆದ ಸ್ಯಾಂಪಲ್ ಸಂಗ್ರಹ ಮಾಡಿದ್ದು ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.