ಬೆಂಗಳೂರು : ಕಳೆದ ಕೆಲವು ದಿನಗಳಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯಥಯ ಉಂಟಾಗಿ ಪ್ರಾಣಿಕರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು ಇದೀಗ ಇಂದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವಂತಹ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ.
ಇಂಡಿಗೋ ಸಂಸ್ಥೆ ಸುಮಾರು 60ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದು ಮಾಡಿದೆ. ವಿಮಾನ ರದ್ದು ಬಗ್ಗೆ 5 ಗಂಟೆ ವಂಚಿತವಾಗಿ ಪ್ರಯಾಣಿಕರಿಗೆ ಸಂದೇಶ ನೀಡಿತು ದೆಹಲಿ, ಲಖನೌ, ಮುಂಬೈ, ಹೈದರಾಬಾದ್, ಭುವನೇಶ್ವರ, ರಾಯಪುರ, ಪಾಟ್ನಾ ಹಾಗು ಅಮೃತಸರಕ್ಕೆ ತರಬೇಕಿದ್ದ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಪ್ರಯಾಣಿಕರಿಗೆ 5 ಗಂಟೆ ಮೊದಲೇ ಸಂದೇಶ ರವಾನಿಸಿದ್ದರಿಂದ ಏರ್ಪೋರ್ಟ್ ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ.








