ಉತ್ತರಕನ್ನಡ : ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಹಾವಳಿಯಿಂದ ಅನೇಕ ಜನರು ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದೀಗ ಉತ್ತರ ಕನ್ನಡದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ರಾತ್ರೋರಾತ್ರಿ ಐವರು ಬಡ್ಡಿ ದಂಧೆ ಕೋರರನ್ನು ಅರೆಸ್ಟ್ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ.
ಹೌದು ರಾತ್ರೋರಾತ್ರಿ ಬಡ್ಡಿ ದಂಧೆ ಕೋರರನ್ನು ಅರೆಸ್ಟ್ ಮಾಡಲಾಗಿದ್ದು, ಮುಂಡಗೋಡ ತಾಲೂಕಿನಲ್ಲಿ ಸಿನಿಮೀಯ ರೀತಿಯಲ್ಲಿ ಬಡ್ಡಿ ದಂಧೆ ಕರೋನ ಮೀಟಿಂಗ್ ನಡೆಯುತ್ತಿತ್ತು. ಈ ವೇಳೆ ರಾತ್ರೋ ರಾತ್ರಿ ಮೀಟರ್ ಬಡ್ಡಿಯಲ್ಲಿ NMD ಖ್ಯಾತಿಯ ಜಮೀರ್ನನ್ನು ಅರೆಸ್ಟ್ ಮಾಡಿದ್ದಾರೆ. ಒಬ್ಬರಿಗೆ 10 ಲಕ್ಷ ಕೊಟ್ಟು 30% ಬಡ್ಡಿಯಲ್ಲಿ 15 ಪರ್ಸೆಂಟ್ ತನಗೆ ಉಳಿದ 15% ವಸೂಲಿ ಹುಡುಗರಿಗೆ ಎಂದು ಬಡ್ಡಿ ದಂಧೆಕೊರ ಹೇಳಿದ್ದ. ಕೆಲಸ ಇಲ್ಲದ ಯುವಕರನ್ನು ಬಳಸಿಕೊಂಡು ಮೀಟರ್ ಬಡ್ಡಿ ದಂಧೆ ನಡಿಸುತ್ತಿದ್ದ ಎನ್ನಲಾಗಿದೆ ಸ್ಥಳೀಯ ದೂರಿನ ಮೇರೆಗೆ ಸದ್ಯ ಐವರು ಪುಡಿ ರೌಡಿಗಳನ್ನ ಇದೀಗ ಅರೆಸ್ಟ್ ಮಾಡಿದ್ದಾರೆ.
ತಿಂಗಳಿಗೆ 40 ರಿಂದ 50,000 ಬಡ್ಡಿ ಬರುತ್ತಿತ್ತು. ರಾತ್ರಿ ಹೊಡೆದು ಬಡಿದು ಬಡ್ಡಿ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಮುಂಡಗೋಡ ತಾಲೂಕಿದ್ಯಂತ ಬಡ್ಡಿ ದಂದೆ ನಡೆಯುತ್ತಿತ್ತು. ಒಂದು ಲಕ್ಷ ಸಾಲಕ್ಕೆ ತಿಂಗಳಿಗೆ 3000 ಬಡ್ಡಿ ಕಟ್ಟಬೇಕಿತ್ತು ಎಂದು ತಿಳಿದುಬಂದಿದೆ. ಎನ್ ಎಂ ಡಿ ಖ್ಯಾತಿಯ ಜಮೀರ್ ನಿಂದ ಈ ಒಂದು ಬಡ್ಡಿ ದಂಧೆ ನಡೆಯುತ್ತಿತ್ತು. 17 ಜನ ಮೀಟಿಂಗ್ ಬಡ್ಡಿ ದಂಧೆಕೊರರಿಗೆ ಪೊಲೀಸರು ಕ್ಲಾಸ್ ತೆಗೆದುಕೊಂಡಿದ್ದಾರೆ. 21 ಪ್ರತ್ಯೇಕ ತಂಡಗಳಿಂದ ಮನೆ ಹಾಗೂ ಹೋಟೆಲ್ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.