ಉತ್ತರಖಂಡ : ಕೋಲ್ಕತ್ತಾದ ಟ್ರೈನಿ ವೈದ್ಯೇಯ ಮೇಲೆ ಅತ್ಯಾಚಾರ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ, ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಇದೀಗ ಉತ್ತರಖಂಡನಲ್ಲಿ ಬಸ್ ನಲ್ಲಿಯೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ದೆಹಲಿಯಿಂದ ಡೆಹ್ರಾಡೂನ್ಗೆ ತೆರಳಿದ ಸರ್ಕಾರಿ ಬಸ್ನೊಳಗೆ ಬಸ್ ನಿಲ್ದಾಣದಲ್ಲಿಯೇ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯವೊಂದು ಇಡೀ ದೇಶವೇ ಮತ್ತೊಮ್ಮೆ ತಲೆತಗ್ಗಿಸುವಂತೆ ಮಾಡಿದೆ. ಹದಿಹರೆಯದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಉತ್ತರಾಖಂಡದ ಹರಿದ್ವಾರದ ಬುಗ್ಗವಾಲಾ ನಿವಾಸಿಗಳಾದ ಧರ್ಮೇಂದ್ರ ಕುಮಾರ್ (32) ಮತ್ತು ರಾಜ್‌ಪಾಲ್ (57), ಹರಿದ್ವಾರದ ಭಗವಾನ್‌ಪುರ ನಿವಾಸಿ ದೇವೇಂದ್ರ (52), ಪಟೇಲ್ ನಗರದ ನಿವಾಸಿ ರಾಜೇಶ್ ಕುಮಾರ್ ಸೋಂಕರ್ (38), ನವಾಬ್‌ಗಂಜ್ ನಿವಾಸಿ ರವಿಕುಮಾರ್ (34) ಎಂದು ಗುರುತಿಸಲಾಗಿದೆ.ಇದರಲ್ಲಿ ಬಸ್ ನ ಡ್ರೈವರ್ ಮತ್ತು ಕಂಡೆಕ್ಟರ್ ಕೂಡ ಇದಾರೆ.
ಆಗಸ್ಟ್ 12ರಂದು ತಡರಾತ್ರಿ ಡೆಹ್ರಾಡೂನ್ ಐಎಸ್‌ಬಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಅಪ್ತಾಪ್ತ ಬಾಲಕಿ ಒಂಟಿಯಾಗಿ ಕುಳಿತಿರುವುದು ಕಂಡುಬಂದಿದ್ದು, ಅತ್ಯಾಚಾರಕ್ಕೊಳಗಾಗಿದ್ದ ಆಕೆಯನ್ನು ಅಲ್ಲಿಂದ ಬಾಲ ನಿಕೇತನಕ್ಕೆ ಕಳುಹಿಸಲಾಗಿದೆ. ಬಾಲ ನಿಕೇತನದಲ್ಲಿ ಕೌನ್ಸೆಲಿಂಗ್‌ನ ಸಮಯದಲ್ಲಿ ಅವಳು ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ.
ಮಾಹಿತಿ ಪಡೆದ ತಕ್ಷಣ, ಪೊಲೀಸರು ಕಾರ್ಯಾಚರಣೆಗೆ ಇಳಿದರು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡುವ ಮೂಲಕ ರೋಡ್‌ವೇಸ್ ಬಸ್ ಅನ್ನು ಗುರುತಿಸಿದರು. ನಂತರ ಚಾಲಕ, ಕಂಡಕ್ಟರ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಯಿತು.