ರಾಯಚೂರು : ಮನೆ ಮುಂದೆ ಪಟಾಕಿ ಹೊಡೆಯುತ್ತಿರುವ ವಿಚಾರಕ್ಕೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯಗೊಂಡ ಘಟನೆ ರಾಯಚೂರು ಜಿಲ್ಲೆಯ ನಗರದ ರಾಗಿಮಾನಗಡ್ಡದಲ್ಲಿ ನಡೆದಿದೆ. ಇದೀಗ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಲೆ ಮಾಡಿರುವ ಹಂತಕರುಕೊಲೆಯಾದ ನರಸಿಂಹಲು (32) ಮನೆಯ ಮುಂದೆ ಪಟಾಕಿ ಸಿಡಿಸುತ್ತಿದ್ದರು, ಇದಕ್ಕೆ ವಿರೋಧಿಸಿದ್ದ ನರಸಿಂಹಲು ಮನೆಯಲ್ಲಿ ಮಕ್ಕಳಿದ್ದಾರೆ ಮನೆಮುಂದೆ ಪಟಾಕಿ ಸಿಡಿಸಬೇಡಿ ಎಂದು ಹೇಳಿದ್ದನು.ಇದರಿಂದಾಗಿ ಕೆರಳಿದ್ದ ಹಂತಕರು ನರಸಿಂಹಲು ಮೇಲೆ ಹಲ್ಲೆಗೆ ಮುಂದಾಗಿದ್ದರು. ಎರಡು ಗುಂಪುಗಳ ಮಧ್ಯೆ ಪರಸ್ಪರ ಬಡಿದಾಟವಾಗಿದ್ದು.
ರಾಗಿಮನಗಡ್ಡದಲ್ಲಿ ಕಾರ್ನರ್ ಬಳಿ ಮನೆ ಹೊಂದಿರುವ ಮೃತ ನರಸಿಂಹ, ನಿನ್ನೆ ರಾತ್ರಿ ರಸ್ತೆಯಲ್ಲಿ ಅದೇ ಏರಿಯಾದ ಹುಡುಗರು ಪಟಾಕಿ ಹೊಡೆಯುತ್ತಿದ್ದರು. ಆಗ ಯಾಕೆ ಪಟಾಕಿ ಹೊಡೆಯುತ್ತಿದ್ದಿರಿ ಅಂತ ನರಸಿಂಹ ಪ್ರಶ್ನಿಸಿದ್ದಾರೆ. ಆಗ ಏರಿಯಾ ಹುಡುಗರು ಮಾತು ಕೇಳದ ಹಿನ್ನೆಲೆ ನರೇಶ್, ಪ್ರವೀಣ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಆಗ ಹಲ್ಲೆಗೊಳಗಾದ ಯುವಕರು ಹಾಗೂ ಅವರ ಕಡೆಯವರಿಂದ ನರಸಿಂಹನ ಹತ್ಯೆ ಮಾಡಿದ್ದಾರೆ.
ಮೃತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿಲ್ಲ. ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಸ್ಪಷ್ಟನೆ ನೀಡಲಾಗಿದೆ. ಆಗ ಹಲ್ಲೆಗೊಳಗಾದ ಕಡೆಯವರಿಂದ ನರಸಿಂಹಲುನನ್ನ ಎಳೆತಂದು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಇತ್ತ ಮೃತನ ವಿರುದ್ಧವೂ ಹಲ್ಲೆಗೊಳಗಾದವರಿಂದ ಕೌಂಟರ್ ಕೇಸ್ ದಾಖಲಿಸಿದ್ದಾರೆ.