ಮೈಸೂರು : ಇಂದು ಮೈಸೂರಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಭಾರಿ ಮಳೆ ಆಯಿತು.
ಹೆಬ್ಬಾಳು, ಬ್ಯಾಡರಹಳ್ಳಿ, ಕಗ್ಗರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಮಳೆಯಾಗಿದೆ. ಬಿರುಗಾಳಿ ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಈ ವೇಳೆ ಆಲಿಕಲ್ಲು ಮಳೆ ಜೋರಾಗಿದ್ದರಿಂದ ವಾಹನ ಸವಾರರು ಪರದಾಡಿದರು.
ಈ ವೇಳೆ ತಕ್ಷಣ ರಸ್ತೆ ಬದಿಯಲ್ಲಿ ವಾಹನ ಸವಾರರು ಆಲಿಕಲ್ಲು ಮಳೆಯಿಂದ ಆಶ್ರಯ ಪಡೆದುಕೊಂಡರು. ಅಲ್ಲದೆ ಇನ್ನೂ ಕೆಲವು ಸಾರ್ವಜನಿಕರು ಆಲಿಕಲ್ಲುಗಳನ್ನು ಪಾತ್ರೆ ಪಗಡೆಗಳಲ್ಲಿ ಸಂಗ್ರಹಿಸುತ್ತಿರುವುದು ಕಂಡುಬಂದಿತು