ಬೆಳಗಾವಿ : ಕಳೆದ 2 ತಿಂಗಳ ಅವಧಿಯಲ್ಲಿ ದೇಶದ 5 ರಾಜ್ಯಗಳಲ್ಲಿ 18 ಜನ ರನ್ನು ಬಲಿ ಪಡೆದಿರುವ ನರಸಂಬಂಧಿ ವ್ಯಾಧಿ ಯಾದ ಗುಯಿಲಿನ್ ಬರೆ ಸಿಂಡೋಮ್ (GBS)ಗೆ ಇದೀಗ ಕರ್ನಾಟಕದ ಮೊದಲ ವ್ಯಕ್ತಿ ಬಲಿಯಾಗಿದ್ದಾರೆ.
ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ 64 ವರ್ಷದ ವೃದ್ದರೊಬ್ಬರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶನಿವಾರ ಈ ವೈರಸ್ ನಿಂದ ಸಾವಿಗೀಡಾಗಿದ್ದಾರೆ. ದೋನೆವಾಡಿ ಗ್ರಾಮದ ಯೆತಿಲ್ ಬಾಳಗೊಂಡ ಪಾಟೀಲ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.ಇದು ಈ ಕಾಯಿಲೆಗೆ ರಾಜ್ಯದವರು ಬಲಿಯಾದ ಮೊದಲ ಪ್ರಕರಣ. ಇದರೊಂದಿಗೆ ಕರ್ನಾಟಕ ಅಕ್ಕಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡಿ ನಲ್ಲಿ ಈಗಾಗಲೇ ಈ ವ್ಯಾಧಿ ಕಾಣಿಸಿಕೊಂಡಿದೆ.
ಇದು ಸಾಂಕ್ರಾಮಿಕ ಅಲ್ಲ, ಭಾರೀ ಪ್ರಮಾಣ ದಲ್ಲಿ ಮಾರಣಾಂತಿಕವೂ ಅಲ್ಲವಾದರೂ, ಸೊಂಕಿಗೆ ನಿಖರ ಕಾರಣ ಏನೆಂಬುದು ಇದು ವರೆಗೂ ಖಚಿತವಾಗದ ಹಿನ್ನೆಲೆ ವಿವಿಧ ರಾಜ್ಯ ಗಳಲಿ ಈ ಕುರಿತು ಆತಂಕ ಉಂಟಾಗಿದೆ.ಈಗಾಗಲೇ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ಹಾಗೂ ಮುಂಬೈನಲ್ಲಿ ಇಬ್ಬರು ವ್ಯಕ್ತಿಗಳು ಜಿಬಿಎಸ್ ವೈರಸ್ ನಿಂದ ಸಾವನಪ್ಪಿದ್ದಾರೆ ಇದೀಗ ಈ ಒಂದು ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ 64 ವರ್ಷದ ವೃದ್ಧರ ಸಾವಾಗಿದೆ. ಹಾಗಾಗಿ ಜನರಲ್ಲಿ ಆತಂಕ ಹೆಚ್ಚಾಗಿದೆ.