ಬೆಂಗಳೂರು : ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಇಟ್ಟಿದ್ದ ಸಿಡಿಮದ್ದು ಸ್ಪೋಟಗೊಂಡು ಕುರಿಗಾಹಿ ಮಹಿಳೆಯ ಕೈ ಬೆರಳು ಛಿದ್ರಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗುಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಸಿಡಿಮದ್ದು ಸ್ಫೋಟಗೊಂಡು ಗುಮ್ಮನಹಳ್ಳಿ ಗ್ರಾಮದ ರಂಗಮ್ಮ (50) ಗೆ ಗಾಯವಾಗಿದೆ. ಕಾಡು ಹಂದಿ, ಇತರೆ ಪ್ರಾಣಿಗಳು ಹೊಲಕ್ಕೆ ಬರದಂತೆ ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡಿದೆ. ಈ ವೇಳೆ ಸಿಡಿಮದ್ದಿನ ವೈರ್ ಮೇಕೆಗೆ ಸುದ್ದಿಕೊಂಡಿದೆ. ಅದನ್ನು ತೆಗೆದು ಮೇಕೆ ಬಿಡಿಸಲು ಹೋದಾಗ ದುರ್ಘಟನೆ ಸಂಭವಿಸಿದೆ. ಸದ್ಯ ರಂಗಮ್ಮಗೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಗಾಯಳು ರಂಗಮ್ಮ ರವಾನಿಸಲಾಗಿದೆ.








