ಧಾರವಾಡ : ಧಾರವಾಡದಲ್ಲಿ ಸರಕು ಸಾಗಣೆ ರೈಲಿನಲ್ಲಿ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅನಾಹುತ ಒಂದು ತಪ್ಪಿದೆ. ಧಾರವಾಡ ಹೊರವಲಯದ ಗೇಟ್ ಬಳಿ ನಿಂತಾಗ ಬೆಂಕಿ ಕಾಣಿಸಿಕೊಂಡಿದೆ.
ಗೋವಾ ಕಡೆಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಗೂಡ್ಸ್ ವಾಹನ ಮಾರ್ಗಮಧ್ಯೆ ಕೆಟ್ಟುನಿಂತಿದೆ.ಆಗ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಳಿಯಾಳ ರಸ್ತೆಯ ರೇಲ್ವೆ ಗೇಟ್ ಬಳಿ ರೈಲು ನಿಂತಿದೆ. ಸುಮಾರು 1 ಗಂಟೆ ಕಾಲ ಗೇಟ್ ಬಳಿಯೇ ರೈಲು ನಿಂತಿದೆ. ಈ ವೇಳೆ ಸಿಬ್ಬಂದಿ ಇಂಜಿನ್ ಆವಡಿಸಿ ರೈಲನ್ನು ತೆರವು ಮಾಡಿದರು. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.