ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡು ಹಾರಿಸಿದ ಅನುಜ್ ಥಾಪನ್ ಇಂದು ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಸಧ್ಯ ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.
Salman Khan residence firing case | Accused Anuj Thapan who attempted suicide in custody has been declared dead by doctors at the hospital: Mumbai Police https://t.co/3OMrikn0nP
— ANI (@ANI) May 1, 2024
ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಗುಂಡು ಹಾರಿಸಿದ ಆರೋಪಿಗಳಿಗೆ ಬಂದೂಕು ನೀಡಿದ ಇಬ್ಬರನ್ನು ಪಂಜಾಬ್ ನಿಂದ ಮುಂಬೈಗೆ ಕರೆತರಲಾಗಿದೆ. ಬಂಧಿತ ಆರೋಪಿಗಳನ್ನ ಸೋನು ಸುಭಾಷ್ ಚಂದರ್ ಮತ್ತು ಅನುಜ್ ಥಾಪನ್ ಎಂದು ಗುರುತಿಸಲಾಗಿದೆ. ಅನುಜ್ ಥಾಪನ್ ಟ್ರಕ್’ನಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದು, ಸುಭಾಷ್ ಕೃಷಿಕನಾಗಿದ್ದಾನೆ. ಅನುಜ್ ವಿರುದ್ಧ ಈಗಾಗಲೇ ಅಪರಾಧಗಳಲ್ಲಿ ಪ್ರಕರಣ ದಾಖಲಾಗಿದ್ದು, ಲಾರೆನ್ಸ್ ವಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗಿದೆ.
ಇವರಿಬ್ಬರು ಮಾರ್ಚ್ 15ರಂದು ಪನ್ವೇಲ್’ನಲ್ಲಿ ಎರಡು ಪಿಸ್ತೂಲ್’ಗಳನ್ನ ನೀಡಿದ್ದರು.
BREAKING : ನಟ ಸಲ್ಮಾನ್ ಖಾನ್ ಫೈರಿಂಗ್ ಪ್ರಕರಣ : ಪೊಲೀಸ್ ಕಸ್ಟಡಿಯಲ್ಲಿ ಆರೋಪಿ ‘ಅನುಜ್’ ಶವವಾಗಿ ಪತ್ತೆ
ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ
ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ