ಬೆಂಗಳೂರು : ಪೇಯ್ಡ್ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಬೆಂಗಳೂರಿನ ಸುಮನಹಳ್ಳಿ ಬ್ರಿಡ್ಜ್ ಬಳಿ ಈ ಒಂದು ಘಟನೆ ನಡೆದಿದೆ. ಪೈಯ್ಡ್ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಸವಾರರು ತೆರಳಿದ್ದರು.
ಈ ವೇಳೆ ಏಕಾಏಕಿ ಅಲ್ಲಿ ನಿಲ್ಲಿಸಿದ್ದ ಬೈಕ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ 4-5 ಬೈಕುಗಳಿಗೆ ಬೆಂಕಿಯ ಕೆನಾಲಿಗೆ ಆವರಿಸಿದೆ. ತಕ್ಷಣ ಸ್ಥಳೀಯರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿದ್ದಾರೆ. ಅಕ್ಕ ಪಕ್ಕದ ಬೈಕುಗಳನ್ನು ಸಾರ್ವಜನಿಕರು ತಕ್ಷಣ ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ ಆಗಬೇಕಾಗಿದ್ದ ಬಾರಿ ಅನಾಹುತ ಒಂದು ಸ್ಥಳೀಯರು ತಪ್ಪಿಸಿದ್ದಾರೆ.








