ರಾಯಚೂರು : ರಾಯಚೂರಿನಲ್ಲಿ ಭೀಕರವಾದ ಅಗ್ನಿ ದುರಂತ ಸಂಭವಿಸಿದ್ದು, ಮತ್ತು ದೇಹ ಒಂದನ್ನು ಸಾಗಿಸುತ್ತಿದ್ದ ಅಂಬುಲೆನ್ಸ್ ನಲ್ಲಿ ಇಂಜಿನ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಆತಕ್ಷಣ ಬೆಂಕಿಯ ಕೆನಾಲಿಗೆ ಇಡಿ ಆಂಬುಲೆನ್ಸ್ ಆವರಿಸಿದ್ದು ಅದೃಷ್ಟವಶಾತ್ ಅಂಬುಲೆನ್ಸ್ ಚಾಲಕ ಸೇರಿ ನಾಲ್ವರು ಬಚಾವ್ ಆಗಿರುವ ಘಟನೆ ನಡೆದಿದೆ.
ಹೌದು ಮೃತದೇಹ ಸಾಗಿಸುತ್ತಿರುವಾಗ ಚಲಿಸುತ್ತಿರುವಾಗಲೇ ಅಂಬುಲೆನ್ಸ್ ಒಂದು ಘಟನೆ ರಾಯಚೂರು ನಗರದ ಆಶಾಪುರ ಮಾರ್ಗದಲ್ಲಿ ಈ ಒಂದು ಘಟನೆ ಸಂಭವಿಸಿದೆ. ರಾಯಚೂರು ನಿಂದ ಆಶಾಪುರಕ್ಕೆ ಆಂಬುಲೆನ್ಸ್ ತೆರಳುತ್ತಿತ್ತು. ಅಂಹುಲೆನ್ಸ್ ನಲ್ಲಿದ್ದ ಚಾಲಕ ಸೇರಿ ನಾಲ್ವರು ಅದೃಷ್ಟವಶಾತ್ ಪಾರಾಗಿದ್ದಾರೆ. ಆಂಬುಲೆನ್ಸ್ ನ ಇಂಜಿನ್ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ.