ನವದೆಹಲಿ : ಉತ್ತರ ದೆಹಲಿಯ ರೋಹಿಣಿ ಜಿಲ್ಲೆಯ ಪ್ರೇಮ್ ನಗರದಲ್ಲಿರುವ ಸೂರ್ಯ ಮಂದಿರದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ 65 ವರ್ಷದ ಅರ್ಚಕರೊಬ್ಬರು ಸುಟ್ಟು ಕರಕಲಾದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದೆಹಲಿಯ ರೋಹಿಣಿ ಪ್ರದೇಶದ ಸೂರ್ಯ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರ್ಚಕರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಅಪಘಾತದಲ್ಲಿ ದೇವಸ್ಥಾನದ ಅರ್ಚಕ ಸುಟ್ಟು ಕರಕಲಾಗಿದ್ದಾರೆ.
ಹೌದು ದೆಹಲಿಯ ರೋಹಿಣಿ ಪ್ರದೇಶದ ಸೂರ್ಯ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರ್ಚಕರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಅಪಘಾತದಲ್ಲಿ ದೇವಸ್ಥಾನದ ಅರ್ಚಕ ಸುಟ್ಟು ಕರಕಲಾಗಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದ ಅರ್ಚಕರನ್ನು 65 ವರ್ಷದ ಪಂಡಿತ್ ಬನ್ವಾರಿ ಲಾಲ್ ಶರ್ಮಾ ಎಂದು ಗುರುತಿಸಲಾಗಿದೆ.
ಶನಿವಾರ, ಪ್ರೇಮ್ ನಗರ ಪೊಲೀಸ್ ಠಾಣೆಗೆ ಸೂರ್ಯ ದೇವಾಲಯದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕಿತು. ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿತು. ಆದರೆ, ಅರ್ಚಕ ಬನ್ವಾರಿ ಲಾಲ್ ಶರ್ಮಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ತಕ್ಷಣ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.