ಬೀದರ್ : ಬಿತ್ತನೆ ಬೀಜ ಗೋದಾವಣಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಸುಮಾರು ಒಂದು ಕೋಟಿಗೂ ಅಧಿಕ ಈರುಳ್ಳಿ ಬಿತ್ತನೆ ಬೀಜ ಸುಟ್ಟು ಬಸ್ಮವಾಗಿರುವ ಘಟನೆ ಬೀದರ ತಾಲೂಕಿನ ಬದಗಲ್ ಎಂಬ ಗ್ರಾಮದಲ್ಲಿ ನಡೆದಿದೆ.
ಬದಗಲ ಗ್ರಾಮದಲ್ಲಿ ಬಿತ್ತನೆ ಬೀಜ ಗೋದಾಮಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು, ಬೀದರ್ ತಾಲೂಕಿನ ಬದಗಲ್ ಗ್ರಾಮದಲ್ಲಿ ಸಂಭವಿಸಿರುವ ಘಟನೆಯಾಗಿದೆ. ಘಟನೆಯಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಈರುಳ್ಳಿ ಬಿತ್ತನೆ ಬೀಜ ಭಸ್ಮವಾಗಿವೆ.
ಗ್ರಾಮದ ಬಾಕಿ ಸೇಟಿಗೆ ಈ ಈರುಳ್ಳಿ ಗೋದಾಮ ಸೇರಿದೆ ಎನ್ನಲಾಗುತ್ತಿದೆ.ರೈತರಿಂದ ಈರುಳ್ಳಿ ಬೀಜ ಖರೀದಿಸಿ ಸಂಗ್ರಹಿಸಿ ಇಡಲಾಗಿತ್ತು ಎಂದುಹೇಳಲಾಗುತ್ತಿದೆ.ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ.