ಬೆಂಗಳೂರು : ಬೆಂಗಳೂರಲ್ಲಿ ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಂಭೀರವಾಗಿ ಗಾಯಗೊಂಡಿದ್ದ ಪೂರ್ಣಿಮಾ ಎನ್ನುವ ಮಹಿಳೆ ಸಾವನಪ್ಪಿದ್ದಾರೆ. ವಿಕ್ಟೋರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳಿದಿದ್ದಾರೆ ಕಳೆದ ಮಂಗಳವಾರ ಮಂಜುಶ್ರೀ ಲೇಔಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು.
ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಮಂಜುಶ್ರೀ ಲೇಔಟ್ ನಲ್ಲಿ ಗ್ಯಾಸ್ ಸೋರಿಕೆಯಾಗಿ ವಾಸನೆ ಬಂದಾಗ ಬಾಡಿಗೆದಾರನ ಮನೆಗೆ ಮಾಲಕಿ ಪೂರ್ಣಿಮಾ ಹೋಗಿದ್ದಳು. ಬಾಡಿಗೆದಾರನ ಮನೆ ಪರಿಶೀಲನೆ ಹೋಗಿದ್ದ ವೇಳೆ ಮಾಲಕಿ ಪೂರ್ಣಿಮಾ ಸ್ವಿಚ್ ಆನ್ ಮಾಡುತ್ತಿದ್ದಂತೆ ಅಗ್ನಿ ಅವಘಡ ಸಂಭವಿಸಿತ್ತು. ಪೂರ್ಣಿಮಾ ಹಾಗೂ ಬಾಡಿಗೆದಾರ ವೆಂಕಟೇಶ್ ಗೆ ಗಂಭೀರವಾದ ಗಾಯಗಳಾಗಿತ್ತು. ಪೂರ್ಣಿಮಾ ಇದೀಗ ಸಾವನ್ನಪ್ಪಿದ್ದು, ಬಾಡಿಗೆದಾರ ವೆಂಕಟೇಶ ಸ್ಥಿತಿ ಗಂಭೀರವಾಗಿದೆ.








