ಮಂಗಳೂರು : ಮುಡಾ ಕಮಿಷನರ್ ವಿರುದ್ಧವೇ ವಾಮಾಚಾರ ನಡೆಸುವ ಬೆದರಿಕೆ ಕೇಳಿಬಂದಿದ್ದು, ಬ್ರೋಕರ್ ಗಳ ಅಟ್ಟಹಾಸಕ್ಕೆ ಇದೀಗ ಮಂಗಳೂರಿನ ಮುಡಾ ಕಮಿಷನರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಂಗಳೂರಿನ ಉರ್ವ ಠಾಣೆಗೆ ಮುಡಾ ಕಮಿಷನರ್ ನೂರ್ ಝಹರಾ ಖಾನಂ ದೂರು ನೀಡಿದ್ದಾರೆ. ಕಮಿಷನರ್ ದೂರು ಹಿನ್ನೆಲೆ ಇದೀಗ ಉರ್ವ ಪೊಲೀಸ್ ಠಾಣೆಯಲ್ಲಿ ಇಬ್ಬರು ದಲ್ಲಾಳಿಗಳ ವಿರುದ್ಧ FIR ದಾಖಲಾಗಿದೆ.
ಕಚೇರಿಗೆ ದಲ್ಲಾಳಿಗಳಿಗೆ ನಿರ್ಬಂಧ ವಿಧಿಸಿದ್ದಕ್ಕೆ ವಾಮಾಚಾರದ ಬೆದರಿಕೆ ಕೇಳಿ ಬಂದಿದೆ. ಅಲ್ಲದೇ ವಾಟ್ಸಪ್ ಮೂಲಕ ಹಾಗು ಫೋನ್ ಕರೆ ಮೂಲಕ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹಾಗಾಗಿ ಮುಡಾ ಕಮಿಷನರ್ ನೂರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಇಬ್ಬರು ದಲ್ಲಾಳಿಗಳ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಮಂಗಳೂರಿನ ಊರ್ವ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಬ್ರೋಕರ್ಗಳಾದ ವಹಾಬ (45) ಸಾಬೀದ್ (25) ಎನ್ನುವವರ ವಿರುದ್ಧ FIR ದಾಖಲಾಗಿದೆ. ಅಲ್ಲದೇ ವಾಟ್ಸಪ್ ಗ್ರೂಪ್ ನಲ್ಲಿ ದಲ್ಲಾಳಿಗಳು ಪ್ರಾಣ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಅಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ವಾತಾವರಣ ಸೃಷ್ಟಿಸಿದ ಆರೋಪ ಸಹ ಕೇಳಿಬಂದಿದ್ದು, ಈ ಸಂಬಂಧ ಮುಡಾ ಆಯುಕ್ತರು ದೂರು ನೀಡಿದ್ದಾರೆ. ಸದ್ಯ ಠಾಣೆಯಲ್ಲಿ BNS ಸೆಕ್ಷನ್ 132, 351 356 (1) 61 352 (2) ರ ಅಡಿ ಪ್ರಕರಣ ದಾಖಲಾಗಿದೆ.