ಬಾಗಲಕೋಟೆ : ವ್ಯಕ್ತಿತ್ವ ವಿಕಸನ ಹೆಸರಿನಲ್ಲಿ ಸಾಹಸ ಹಾಗೂ ಗನ್ ತರಬೇತಿ ನೀಡಲಾಗಿದೆ ಎಂದು ಆರೋಪಿಸಿ ತರಬೇತಿಯಲ್ಲಿ ಭಾಗಿಯಾಗಿದ್ದ 27 ಶ್ರೀರಾಮ ಸೇನೆಯ ಕಾರ್ಯಕರ್ತರ ವಿರುದ್ಧ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಹೌದು ಶ್ರೀರಾಮ ಸೇನೆಯ 27 ಕಾರ್ಯಕರ್ತರ ವಿರುದ್ಧ ಇದೀಗ FIR ದಾಖಲು ಮಾಡಲಾಗಿದೆ. ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ಗನ್ ಹಾಗೂ ಸಾಹಸ ತರಬೇತಿ ನೀಡಲಾಗುತ್ತಿತ್ತು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಕಾರ್ಯಕರ್ತರಿಗೆ ಈ ಒಂದು ತರಬೇತಿ ನೀಡಲಾಗುತ್ತಿತ್ತು. ನಿಂಗಪ್ಪ ಹೂಗಾರ್ ಎಂಬುವವರ ದೂರಿನ ಮೇರೆಗೆ ಇದೀಗ FIR ದಾಖಲಾಗಿದೆ.
ಜಮಖಂಡಿ ತಾಲೂಕಿನ ಸಾವಳಗಿ ಠಾಣೆಯಲ್ಲಿ FIR ದಾಖಲಾಗಿದೆ. 2024 ಡಿಸೆಂಬರ್ 24 ರಿಂದ ಡಿಸೆಂಬರ್ 29 ರವರೆಗೆ ಗನ್ ತರಬೇತಿ ನಡೆದಿತ್ತು. ಶ್ರೀರಾಮ ಸೇನೆಯ ಕಾರ್ಯಕರ್ತರಾದ ಪ್ರಕಾಶ್ ಪತ್ತಾರ್, ಯಮನಪ್ಪ ಕೋರಿ, ಮಹೇಶ್ ಬಿರಾದಾರ್, ಆನಂದ್ ಜಂಬಗಿ ಮಠ ಹಾಗೂ ಗಂಗಾಧರ ಕುಲಕರ್ಣಿ ಸೇರಿದಂತೆ ಒಟ್ಟು 27 ಜನರ ವಿರುದ್ಧ ಸಾವಳಗಿ ಠಾಣೆಯಲ್ಲಿ ಇದೀಗ FIR ದಾಖಲಾಗಿದೆ. ಸೇನಾ ತರಬೇತಿ ಮಾದರಿಯಲ್ಲಿ ಯುವಕರಿಗೆ ತರಬೇತಿ ನೀಡಲಾಗಿತ್ತು.