ಬೆಂಗಳೂರು : ಹೊಸ ವರ್ಷಾಚರಣೆ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಬೆಳ್ಳಂದೂರು ಪಬ್ ಒಂದರಲ್ಲಿ ಯುವತಿಯ ಜೊತೆಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿ ಬೇಡವೆಂದು ನಿರಾಕರಿಸಿದರು ಕೂಡ ಮದ್ಯ ಸೇವಿಸಲು ಅಸಭ್ಯವಾಗಿ ವರ್ತಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ
ಹೌದು ಬೆಂಗಳೂರಿನ ಬೆಳ್ಳಂದೂರಿನ ಪಬ್ನಲ್ಲಿ ಯುವತಿಯ ಜೊತೆಗೆ ಯುವಕ ಅಸಭ್ಯ ವರ್ತನೆ ತೋರಿದ್ದಾನೆ. ಪಾರ್ಟಿ ಮಾಡುತ್ತಿದ್ದ ಯುವತಿಗೆ ಮದ್ಯ ಸೇವಿಸಲು ಕಿಡಿಗೇಡಿ ಒಬ್ಬ ಪೀಡಿಸುತ್ತಿದ್ದ. ಈ ವೇಳೆ ಮದ್ಯ ಬೇಡ ಎಂದು ಯುವತಿ ನಿರಾಕರಣೆ ಮಾಡಿದ್ದಾಳೆ.ಕುಡಿಯಲೇ ಬೇಕು ಎಂದು ಯುವಕ ಆಸಭ್ಯವಾಗಿ ವರ್ತಿಸುತ್ತಿದ್ದ. ಪಬ್ ಸಿಬ್ಬಂದಿ ಬರುತ್ತಿದ್ದಂತೆ ಯುವಕ ಸ್ಥಳದಿಂದ ಪರಾರಿ ಆಗಿದ್ದಾನೆ. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ FIR ದಾಖಲಾಗಿದೆ.