ಬೆಂಗಳೂರು : ವರ್ಗಾವಣೆಗಾಗಿ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಸಬ್ ಇನ್ಸ್ಪೆಕ್ಟರ್ ವಿರುದ್ಧ ಇದೀಗ FIR ದಾಖಲಾಗಿದೆ. ಹೌದು ಹೆಂಡತಿಗೆ ವರದಕ್ಷಿಣೆ ಕಿರುಕುಳ ನೀಡಿದ್ದು ಅಲ್ಲದೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ, ಧರ್ಮಸ್ಥಳ ಸಬ್ ಇನ್ಸ್ ಪೆಕ್ಟರ್ ಕಿಶೋರ್ ವಿರುದ್ಧ ಚಂದ್ರಲೇಔಟ್ ಠಾಣೆಯಲ್ಲಿ FIR ದಾಖಲಾಗಿದೆ.
ಹಲ್ಲೆ ಮಾಡಿದ ಸಬ್ ಇನ್ಸ್ಪೆಕ್ಟರ್ ನನ್ನು ಕಿಶೋರ್ ಎಂದು ತಿಳಿದು ಬಂದಿದ್ದು ಪತ್ನಿ ವರ್ಷ ಮೇಲೆ ಕಿಶೋರ್ ವರದಕ್ಷಿಣೆ ಸಂಬಂಧ ಕಿರುಕುಳ ನೀಡುತ್ತಿದ್ದ. 2024ರಲ್ಲಿ ಮೂಡಿಗೆರೆ ಸಬ್ ಇನ್ಸ್ ಪೆಕ್ಟರ್ ʼರನ್ನು ವರ್ಷ ಮದುವೆಯಾಗಿದ್ದರು. ವರದಕ್ಷಿಣೆಗಾಗಿ 10 ಲಕ್ಷ ನಗದು,22 ಲಕ್ಷದ ಕ್ರೇಟಾ ಕಾರು,135 ಗ್ರಾಂ ಚಿನ್ನ ನೀಡಿದ್ರು. ಅಲ್ಲದೆ ವರ್ಷ ಪೋಷಕರು ಲಕ್ಷಾಂತರ ರೂ. ಖರ್ಚು ಮಾಡಿ ಚಿನ್ನ ಹಾಕಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.
ಇಷ್ಟಾದ್ರು ಮೂಡಿಗೆರೆಯಿಂದ ಟ್ರಾನ್ಸ್ ಫರ್ ಮಾಡಿಸೋಕೆ ಕಿಶೋರ್ 10 ಲಕ್ಷ ಕೇಳಿದ್ದರು. ಹಣ ತರದಿದ್ದಕ್ಕೆ ಹೆಂಡ್ತಿ ವರ್ಷಾಳಿಗೆ ಅವಾಚ್ಯವಾಗಿ ನಿಂದಿಸಿ ಗಂಡ,ಅತ್ತೆ ಮಾವ ಹಾಗೂ ಮೈದುನನಿಂದ ಹಲ್ಲೆ ಮಾಡಲಾಗಿದೆ. ಅದಲ್ಲದೆ ಮನಸೋ ಇಚ್ಚೆ ಹಲ್ಲೆ ನಡೆಸಿ ಕಿಶೋರ್ ವರ್ಷಳನ್ನು ಧರ್ಮಸ್ಥಳದ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಇದೀಗ ಎಫ್ಐಆರ್ ದಾಖಲಾಗಿದೆ.