ಮಂಗಳೂರು : ಮಂಗಳೂರಿನ ಯುವತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಧರ್ಮ ವಿರೋಧಿ ಹಾಗೂ ದೇಶದ್ರೋಹಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ಹೈಲ್ಯಾಂಡ್ ಆಸ್ಪತ್ರೆಯ ವೈದ್ಯ ಅಸಿಫಾ ಫಾತಿಮಾ ಎಂಬ ವೈದ್ಯೆ ಧರ್ಮ ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಇದೀಗ ಆಸ್ಪತ್ರೆಯ ಎಚ್ ಆರ್ ಅವರ ದೂರು ಆಧರಿಸಿ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ವೈದ್ಯೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೋಸ್ಟ್ ನಲ್ಲಿ ಕಾಪಾಡಿ ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ.ಹೌದು ನಾನು ಭಾರತೀಯಳು ಆದರೆ ನಾನು ಭಾರತವನ್ನು ದ್ವೇಷಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವೈದ್ಯೆ ಅಸಿಫಾ ಫಾತಿಮಾ. ಇದೀಗ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆ ಫಾತಿಮಾ ವಿರುದ್ಧ ಇದೀಗ ತೀವ್ರ ಅಕ್ರೋಶ ವ್ಯಕ್ತವಾಗುತ್ತಿದೆ.
ಆಕ್ರೋಶ ಭುಗಿಲೆಳುತ್ತಿದಂತೆ ಆಡಳಿತ ಮಂಡಳಿ ವೈದ್ಯೆ ಅಸಿಫಾ ಫಾತಿಮಾ ಅವರನ್ನು ಆಸ್ಪತ್ರೆಯಿಂದ ವಜಾಗೋಳಿಸಿದೆ. ಸದ್ಯ ಅಸಿಫಾ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಐಲ್ಯಾಂಡ್ ಆಸ್ಪತ್ರೆ ಎಚ್ ಆರ್ ಮೊಹಮ್ಮದ್ ಅಸ್ಲಾಂ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಬಿಎನ್ಎಸ್ 196 (1) (a), 353 (2) ಅಡಿಯಲ್ಲಿ FIR ದಾಖಲಾಗಿದೆ.