ಬೆಂಗಳೂರು : ಮೊದಲು ಹುಡುಗನನ್ನು ಭೀಕ್ಷಾಟನೆಗೆ ಇಳಿಸಿ ನಂತರ ಆತನಿಗೆ ಲಿಂಗ ಪರಿವರ್ತನೆ ಮಾಡಿಕೊಳ್ಳಲು ಒತ್ತಾಯ ಮಾಡಿರುವ ಘಟನೆ ಬೆಂಗಳೂರಿನ ಪುಲಕೇಶಿ ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಪುಲಿಕೇಶಿ ನಗರದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹುಡುಗನೊಬ್ಬನನ್ನು ತೃತೀಯ ಲಿಂಗಿಗಳು ಕರೆದುಕೊಂಡು ಮೊದಲು ಬಿಕ್ಷಾಟನೆಗೆ ತಳ್ಳುತ್ತಾರೆ. ಅದಾದ ಬಳಿಕ ಲಿಂಗ ಪರಿವರ್ತನೆ ಮಾಡಿಕೋ ಎಂದು ಒತ್ತಾಯ ಮಾಡಿರುತ್ತಾರೆ.
ಭೀಕ್ಷಾಟನೆ ಸಮಯದಲ್ಲಿ ಕೇವಲ 2000 ನೀಡುತ್ತಿದ್ದರು. ಅದಾದ ಬಳಿಕ ಲಿಂಗ ಪರಿವರ್ತನೆ ಮಾಡಿಕೊಂಡರೆ ಇನ್ನೂ ಹೆಚ್ಚಿನ ಹಣ ನೀಡುವುದಾಗಿ ಅವರು ಆಮಿಷ ಒಡ್ಡಿದ್ದರು. ಇದಕ್ಕೆ ಹುಡುಗನ ವಿರೋಧಿಸಿದಾಗ, ಆತನ ಮೇಲೆ ಹಲ್ಲೆ ನಡೆಸಿದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಹುಡುಗನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಘಟನೆಗೆ ಸಂಬಂಧಪಟ್ಟಂತೆ ಐವರ ವಿರುದ್ಧ ‘FIR’ ದಾಖಲಾಗಿದೆ.