ಬೆಂಗಳೂರು : ಕ್ಯಾಸಿನೋದಲ್ಲಿ ಹೂಡಿಕೆ ಮಾಡಿಸಿ ಲಾಭದ ಆಸೆ ತೋರಿಸಿ ವಂಚನೆ ಎಸಗಿದ್ದು, ಬೆಂಗಳೂರಿನ ಉದ್ಯಮಿ ವಿವೇಕ್ ಹೆಗ್ಡೆಗೆ 25.5 ಕೋಟಿ ರೂಪಾಯಿ ವಂಚಿಸಲಾಗಿದೆ. ಸ್ಯಾಂಡಲ್ ವುಡ್ ಡ್ರಗ್ ಕೇಸ್ ಆರೋಪಿ ರಾಹುಲ್ ತೊನ್ಸೆಯಿಂದ ವಂಚನೆ ಎಸಗಿದ್ದು ಪ್ರಕರಣ ಕುರಿತು ಐವರ ವಿರುದ್ಧ FIR ದಾಖಲಾಗಿದೆ.
ಹೌದು ಆರೋಪಿ ರಾಹುಲ್ ತೊನ್ಸೆ ಅಪ್ಪ ರಾಮಕೃಷ್ಣ ರಾವ್ ತಾಯಿ ರಾಜೇಶ್ವರಿ ಸೇರಿ ಐವರ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. Lಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ತೊನ್ಸೆ ಅಪ್ಪ A1 ಆರೋಪಿ ರಾಮಕೃಷ್ಣ ರಾವ್ ನನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಈ ಹಿಂದೆ ಇಂದಿರಾನಗರದಲ್ಲಿ ತೊನ್ಸೇ ವಿರುದ್ಧ ಸಂಜನಾ ದೂರು ನೀಡಿದ್ದರು.
ಹೂಡಿಕೆ ನೆನಪದಲ್ಲಿ ವಂಚನೆ ಮಾಡಿದ್ದಾನೆ ಎಂದು ಸಂಜನಾ ದೂರು ನೀಡಿದ್ದರು. ಈಗ ವಿವೇಕ್ ಹೆಗಡೆ ಮತ್ತು ಅವರ ಸ್ನೇಹಿತರಿಗೆ 25.5 ಕೋಟಿ ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಕ್ಯಾಸಿನೊದಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಎಸಗಿದ್ದಾರೆ. 2023 ಫೆಬ್ರವರಿ ಇವಳ ರಂದು ವಿವೇಕಿಗೆ ಸ್ನೇಹಿತರ ಮೂಲಕ ರಾಮಕೃಷ್ಣ ಪರಿಚಯವಾಗಿದ್ದು ಉದ್ಯಮಿ ಕಚೇರಿಯಲ್ಲಿ ಸಾಲ ನೀಡುವ ಬಗ್ಗೆ ಸಭೆ ನಡೆದಿತ್ತು. ಶ್ರೀಲಂಕಾ ದುಬೈನಲ್ಲಿ ಕೆಲ ವ್ಯಾಪಾರಗಳಲ್ಲಿ ಲಾಭವಿದೆ ಎಂದು ನಂಬಿಸಿದ್ದರು.