ಬೆಂಗಳೂರು : ಕಿರುತೆರೆಯ ಹಿರಿಯ ನಟಿಯ ವಿರುದ್ಧ ಇದೀಗ ಗಂಭೀರವಾದ ಆರೋಪ ಕೇಳಿ ಬಂದಿದ್ದು ನಿರ್ದೇಶಕ ಹರ್ಷವರ್ಧನ್ ಅವರು ಬ್ಲಾಕ್ಮೇಲ್ ಮಾಡಿ ಮದುವೆಯಾದ ಬಳಿಕ ಕಿರುಕುಳ ನೀಡಿದ್ದಾರೆ ಎಂದು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ಧ ದೂರು ನೀಡಿದ್ದಾರೆ.
ಹೌದು ಕಿರುತೆರೆ ಹಿರಿಯ ನಟಿ ಶಶಿಕಲಾ ವಿರುದ್ಧ ನಿರ್ದೇಶಕ ಹರ್ಷವರ್ಧನ್ ಈ ಒಂದು ಗಂಭೀರವಾದ ಆರೋಪ ಮಾಡಿದ್ದು,ಬ್ಲಾಕ್ ಮೇಲ್ ಮಾಡಿ ಮದುವೆ ಆಗಿ ಈಗ ಕಿರುಕುಳ ನೀಡ್ತಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಪ್ರಜಾರಾಜ್ಯ ಸಿನಿಮಾ ನಿರ್ದೇಶನ ಮಾಡಿದ್ದ ಹರ್ಷವರ್ಧನ್ ದೂರು ನೀಡಿದ್ದಾರೆ.