ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ರಜತ್ ಹಾಗೂ ವಿನಯ್ ಗೌಡ ಅವರು ಕೈಯಲ್ಲಿ ಲಾಂಗ್ ಹಿಡಿದುಕೊಂಡು ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವೇಶ್ವರ ಠಾಣೆ ಪಿಎಸ್ಐ ದೂರು ನೀಡಿದ್ದು, ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ.
ಹೌದು ಬಸವೇಶ್ವರ ಠಾಣೆಯಲ್ಲಿ ಆರ್ಮ್ ಆಕ್ಟ್ ಅಡಿ ಎಫ್ಐಆರ್ ದಾಖಲಾಗಿದೆ. ಬಸವೇಶ್ವರನಗರ ಪಿಎಸ್ಐ ಭಾನುಪ್ರಕಾಶ್ ದೂರು ಆಧರಿಸಿ ರೀಲ್ಸ್ ಮಾಡುವಾಗ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಪೋಸ್ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಜತ್ ಕೈಯಲ್ಲಿ ಲಾಂಗ್ ಹಿಡಿದು ಪೋಸ್ ಕೊಟ್ಟು ರಿಲ್ಸ್ ಅಪ್ಲೋಡ್ ಮಾಡಿದ್ದ ಎನ್ನಲಾಗಿದೆ. ಲಾಂಗ್ ಹಿಡಿದು ಬರೆದ ವಾತಾವರಣ ಸೃಷ್ಟಿಯಾಗುವಂತೆ ರಜತ್ ರಿಲೀಸ್ ಮಾಡಿದ್ದ.
ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಹಾಳು ಮಾಡುವ ರೀತಿ ದುರ್ವರ್ತನೆ ತೋರಿದ್ದರಿಂದ 18 ಸೆಕೆಂಡ್ ಗಳ ವಿಡಿಯೋ ಲಿಂಕ್ ಮೂಲಕ ದೂರು ದಾಖಲಾಗಿದೆ. ನಿಷೇಧಿತ ಮಾರಕಾಸ್ತ್ರವಾದ ಹಿಡಿದುಕೊಂಡು ರಿಲೀಸ್ ಮಾಡಿದ್ದಾರೆ ಎಂದು ಆರೋಪಿಸಿ ರಜತ್ ಮತ್ತು ವಿನಯ್ ಗೌಡ ವಿರುದ್ಧ ಇದೀಗ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.