ರಾಯಚೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಗರ್ಭಿಣಿ ಮಹಿಳೆಯನ್ನು ಬರ್ಬರವಾಗಿ ಕೊಂದು ಬಳಿಕ ನೇಣು ಹಾಕಲಾಗಿ ಎಂದು ಶಂಕಿಸಲಾಗಿದ್ದು, ಗಂಡ ಸೇರಿ ಅವರ ಮನೆಯ 6 ಜನರ ವಿರುದ್ಧ FIR ದಾಖಲಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಅನುಪಮ (20) ಎಂದು ಗುರುತಿಸಲಾಗಿದ್ದು, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಚೆಂಗಡಿ ಗ್ರಾಮದ ಬಸವರಾಜ ಒಕ್ಕಲಿಗ ಅವರ ಪುತ್ರಿ ಅನುಪಮಾ ಮತ್ತು ಸಿಂಧನೂರು ತಾಲ್ಲೂಕಿನ ಬೂದಿಹಾಳ ಗ್ರಾಮದ ನಾಗರಾಜ ಚನ್ನಬಸಪ್ಪ ಛಲವಾದಿ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಪರಿಚಯರಾಗಿ ಪರಸ್ಪರ ಪ್ರೀತಿಸುತ್ತಿದ್ದರು.
ನಂತರ ನಾಗರಾಜ್ ಹಾಗು ಅನುಪಮಾ ಓಡಿ ಹೋಗಿ ಮದುವೆಯಾಗಿ ಗಂಡನ ಸ್ವಗ್ರಾಮ ಬೂದಿಹಾಳದಲ್ಲಿಯೇ ಅನ್ಯೊನ್ಯವಾಗಿದ್ದರು. ನಂತರ ಹುಡುಗಿಯ ಜಾತಿ ಬೇರೆಯಾಗಿದ್ದರಿಂದ ಹುಡುಗನ ಕುಟುಂಬಸ್ಥರು ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಬುಧವಾರ ರಾತ್ರಿ ಅನುಪಮಾ ಗಂಡನ ಮನೆಯಲ್ಲಿಯೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ.
ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಾಗ ಮೃತಪಟ್ಟಿರುವದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಈ ಕುರಿತು ಅನುಪಮಾ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದರಿಂದ, ತಕ್ಷಣ ಊರಿಗೆ ಬಂದಿದ್ದಾರೆ.ತುಂಬು ಗರ್ಭಿಣಿ ನೋಡಿ ಗಂಡ ಹಾಗು ಆತನ ಮನೆಯವರು ಮಾನಸಿಕ, ದೈಹಿಕ ಹಿಂಸೆ ನೀಡಿ ಕೊಂದಿದ್ದಾರೆ ಎಂದು ದೂರು ನೀಡಿದ್ದಾರೆ. ಹೀಗಾಗಿ ಗಂಡ ಸೇರಿದಂತೆ 6 ಜನರ ವಿರುದ್ಧ FIR ದಾಖಲಾಗಿದ್ದು, ಗಂಡ ನಾಗರಾಜ್ ನನ್ನು ವಶಕೆ ಪಡೆದಿದ್ದಾರೆ.