ಧಾರವಾಡ : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಹಲವು ಜಿಲ್ಲೆಗಳಲ್ಲಿ ಜನ ಊರು ಬಿಟ್ಟರೆ ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ನು ಈ ವಿಚಾರವಾಗಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಕಠಿಣ ಕಾನೂನು ಜಾರಿ ತರುವುದಾಗಿ ನಿರ್ಧರಿಸಿದ್ದಾರೆ. ಇದರ ಮಧ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕ್ಷೇತ್ರದಲ್ಲಿ ಕೂಡ ಇದೀಗ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, 7 ತಿಂಗಳ ಗರ್ಭಿಣಿಯನ್ನು ಮನೆಯಿಂದ ಹೊರಹಾಕಿ ಸಿಬ್ಬಂದಿಗಳು ಮನೆಗೆ ಬೀಗ ಹಾಕಿ ಸಿಬ್ಬಂದಿಗಳು ಕ್ರೌರ್ಯ ಮೆರೆದಿದ್ದಾರೆ.
ಹೌದು ಧಾರವಾಡ ಜಿಲ್ಲೆಯಲ್ಲೂ ಕೂಡ ಇದೀಗ ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಅಟ್ಟಹಾಸ ಮೆರೆದಿದ್ದು, ಗರ್ಭಿಣಿ ಹೊರಹಾಕಿ ಮನೆ ಬೇಗ ಹಾಕಿರುವ ಫೈನಾನ್ಸ್ ಸಿಬ್ಬಂದಿಗಳು. ಧಾರವಾಡ ತಾಲೂಕಿನ ಅರವಟ್ಟಿಗೆ ಗ್ರಾಮದಲ್ಲಿ ಕಿರುಕುಳ ನೀಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಸದ್ಯ ಅರವಟ್ಟಿಗೆ ಗ್ರಾಮದ 20ಕ್ಕೂ ಹೆಚ್ಚು ಕುಟುಂಬಗಳು ಊರು ಬಿಟ್ಟಿವೆ.
ಇಕ್ವಿಟಾಸ್ ಫೈನಾನ್ಸ್ ಪ್ರತಿನಿಧಿಗಳ ಕಾಟಕ್ಕೆ ಜನರು ಊರು ಬಿಟ್ಟಿದ್ದಾರೆ. ತಿಂಗಳ ಹಿಂದೆ ಗರ್ಭಿಣಿ ಡಿನಾ ಫಿಲಿಪ್ ಹೊರಹಾಕಿ ಮನೆಗೆ ಬೇಗ ಹಾಕಿದ್ದಾರೆ. ಡಿನಾ ಪತಿ ರಾಹುಲ್ ಬಿಲ್ಲಾ 5 ಲಕ್ಷ ಸಾಲ ಮಾಡಿದ್ದರು. ಮನೆಯ ಹೊರಗಡೆ ವಾಸ ಮಾಡುತ್ತಿರುವ ಗರ್ಭಿಣಿ ಮತ್ತು ಕುಟುಂಬಸ್ಥರು ಹಲವು ಸಲ ಮನವಿ ಮಾಡಿದರು ಕೂಡ ಇಕ್ವಿಟಾಸ್ ಫೈನಾನ್ಸ್ ಇಂದ ಕಿರುಕುಳ ಆರೋಪ ಕೇಳಿ ಬಂದಿದೆ. ಸಚಿವ ಸಂತೋಷ ಲಾಡ್ ಕ್ಷೇತ್ರದ ವ್ಯಾಪ್ತಿಗೆ ಬರುವ ಅರವಟ್ಟಿಗೆ ಗ್ರಾಮ ಎಂದು ಹೇಳಲಾಗುತ್ತಿದೆ.
ಈಗಾಗಲೇ ಗರ್ಭಿಣಿ ಡೀನಾ ಫಿಲಿಪ್ ಕುಟುಂಬಸ್ಥರು ಅರ್ಧ ಕಂತು ತುಂಬಿದ್ದಾರೆ.ಇನ್ನುಳಿದ ಹಣ ತುಂಬಲು ಸಮಯ ಕೇಳಿದರು ಕೂಡ ಫೈನಾನ್ಸ್ ಪ್ರತಿನಿಧಿಗಳು ಕಿರುಕುಳ ನೀಡಿದ್ದಾರೆ. 7 ತಿಂಗಳ ಗರ್ಭಿಣಿ ದಿನ ಫಿಲಪ್ ಅವರನ್ನ ಮನೆಯಿಂದ ಹೊರಹಾಕಿ ಮನೆಗೆ ಬೀಗ ಹಾಕಿದ್ದಾರೆ. ಅರವಟಿಕೆ ಗ್ರಾಮದ ಮತ್ತೆರಡು ಮನೆಗಳಿಗೂ ಬೀಗ ಹಾಕಿ ಕಿರುಕುಳ ನೀಡಿದ್ದಾರೆ. ಮಮ್ತಾಜ್ ಹಟ್ಟಿಹಳಿ ಹಾಗೂ ಮಹಾಂತಯ್ಯ ಚಿಕ್ಕಮಠ ಮನೆಗೂ ಬೀಗ ಹಾಕಿದ್ದಾರೆ ಎನ್ನಲಾಗಿದೆ.