ಚಿಕ್ಕಬಳ್ಳಾಪುರ : ಜಮೀನಿಗೆ ನೀರು ಬಿಡುವ ವಿಚಾರವಾಗಿ ಗಲಾಟೆ ನಡೆದಿದೆ ಈ ವೇಳೆ ಗಲಾಟೆಯಲ್ಲಿ ಅಪ್ಪ-ಮಗ ಸೇರಿ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಗಟಗೆರೆ ಗ್ರಾಮದ ವಡ್ಡರ ಬಂಡೆಯಲ್ಲಿ ಗುರುವಾರ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಗಂಗರಾಜ್ (35) ಎಂದು ತಿಳಿದುಬಂದಿದೆ.
ಇನ್ನು ಗಲಾಟೆಯಲ್ಲಿ ಗಂಗರಾಜು ಸಹೋದರ ನಂದೀಶ್ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆಯಾದ ಗಂಗರಾಜುವನ್ನು ಆತನ ಚಿಕ್ಕಪ್ಪ ಗಂಗಾಧರ ಹಾಗೂ ಮಗ ಸೋಮೇಶ್ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಆರೋಪಿಗಳಾದ ಮೃತನ ಚಿಕ್ಕಪ್ಪ ಗಂಗಾಧರಪ್ಪ ಹಾಗೂ ಆತನ ಪುತ್ರ ಸೋಮೇಶ್ ಎಂಬಾತನನ್ನು ಬಂಧಿಸಲಾಗಿದೆ. ಗೌರಿಬಿದನೂರು ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್ ಗುಗ್ಗರಿ ಹಾಗೂ ಪಿಎಸ್ಐ ಲಲಿತಮ್ಮ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.