ಮಂಡ್ಯ : ವತಿಯಿಂದ ನಿರಂತರ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಗ್ರಹಿಣಿ ಒಬ್ಬಳು ಸುಮಾರು ಐದು ಪುಟಗಳಷ್ಟು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಚುನಾವಣೆ ಬಳಿಕ ದರ ಏರಿಕೆಗೆ ಮುಂದಾದ ‘Airtel’, ಹೆಚ್ಚಿನ ಡೇಟಾ ಬಳಕೆಗೆ ‘Jio’ ಒತ್ತು: ವರದಿ
ವರದಕ್ಷಿಣೆ ಕಾಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಗ್ರಹಿಣಿಯನ್ನು ಪ್ರೇಮಕುಮಾರಿ (26) ಎಂದು ಹೇಳಲಾಗುತ್ತಿದೆ. ಎರಡು ವರ್ಷಗಳ ಹಿಂದೆಯಷ್ಟೇ ಮೈಸೂರಿನ ರಾಘವೇಂದ್ರ ಎಂಬಾತನ ಜೊತೆಗೆ ಪ್ರೇಮಕುಮಾರಿ ಮದುವೆ ಮಾಡಿಕೊಟ್ಟಿದ್ದ ಪೋಷಕರು. ಆರೋಪಿಯಾಗಿರುವ ಪತಿ ರಾಘವೇಂದ್ರ ಮದುವೆಯಲ್ಲೇ ವರದಕ್ಷಿಣೆಯಾಗಿ 5 ಲಕ್ಷ ನಗದು, 150 ಗ್ರಾಂ ಚಿನ್ನ ಪಡೆದಿದ್ದ ಎನ್ನಲಾಗುತ್ತಿದೆ.
ಚುನಾವಣೆ ಬಳಿಕ ದರ ಏರಿಕೆಗೆ ಮುಂದಾದ ‘Airtel’, ಹೆಚ್ಚಿನ ಡೇಟಾ ಬಳಕೆಗೆ ‘Jio’ ಒತ್ತು: ವರದಿ
ಮದುವೆಯಾದ 6 ತಿಂಗಳು ಅನ್ಯೋನ್ಯವಾಗಿದ್ದ ದಂಪತಿಗಳು. ಅನಂತರ ಮತ್ತೆ ವರದಕ್ಷಿಣೆ ತರುವಂತೆ ಪ್ರೇಮಕುಮಾರಿಗೆ ಪೀಡಿಸಿದ್ದ ಪತಿ ರಾಘವೇಂದ್ರ. ಮದುವೆಯಲ್ಲೆ 5ಲಕ್ಷ ವರದಕ್ಷಿಣೆ, ಚಿನ್ನ ಕೊಟ್ಟಿರುವುದಾಗಿ ತಿಳಿಹೇಳಿ ಮತ್ತೆ ವರದಕ್ಷಿಣೆಗೆ ನಿರಾಕರಿಸಿದ್ದ ಪ್ರೇಮಕುಮಾರಿ. ಇದೇ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಜಗಳ ಶುರುವಾಗಿ ಠಾಣೆಯ ಮೆಟಿಲೇರಿ ನ್ಯಾಯ ಪಂಚಾಯಿತಿ ಕೂಡ ನಡೆದಿತ್ತು.
ಕರ್ನಾಟಕಕ್ಕೆ ‘GST ಮೋಸ’ದ ಬಗ್ಗೆ ಚರ್ಚೆಗೆ ಸಿದ್ದವಿದ್ದಿರಾ?: ‘ನಿರ್ಮಲಾ’ಗೆ ‘ಸಚಿವ ಕೃಷ್ಣ ಬೈರೇಗೌಡ’ ಸವಾಲ್!
ಗಂಡನ ಕಿರುಕುಳ ಹೆಚ್ಚಾಗುತ್ತಿದ್ದ ತವರು ಮನೆ ಸೇರಿದ್ದ ಪ್ರೇಮಕುಮಾರಿ. ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಎಲ್‌ಎಲ್‌ಬಿ ಸೇರ್ಪಡೆ ಆಗಿದ್ದಳು. ಆದರೆ ಪತಿ ರಾಘವೇಂದ್ರ ಪ್ರೇಮಾ ಓದುತ್ತಿದ್ದ ಕಾಲೇಜ್ ಬಳಿಯೂ ಬಂದು ವರದಕ್ಷಿಣೆಗಾಗಿ ಕಿರುಕುಳ ಕೊಡಲಾರಂಭಿಸಿ ಕೊಲೆ ಬೆದರಿಕೆಯೂ ಹಾಕಿದ್ದ. ದಿನೇದಿನೆ ಗಂಡನ ಕಿರುಕುಳದಿಂದ ಮನನೊಂದಿಗೆ ಪ್ರೇಮಾ. ಮಾ.20 ರಂದು ಸಂಜೆ ತವರು ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಸದ್ಯ ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.