ಕಲಬುರ್ಗಿ : ಅಂಗನವಾಡಿಯಲ್ಲಿ ಸಹಾಯಕಿ ಹುದ್ದೆ ಕೊಡಿಸುವುದಾಗಿ ಮಹಿಳೆಯಿಂದ ಹದಿನೈದು ಸಾವಿರ ರೂಪಾಯಿ ಸ್ವೀಕರಿಸುತ್ತಿದ್ದ ವೇಳೆ ಸಿಡಿಪಿಒ ಕಚೇರಿಯ FDA ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.
ಹೌದು 15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ FDA ಶಿಲ್ಪಾ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅಂಗನವಾಡಿ ಸಹಾಯಕಿ ಹುದ್ದೆ ಕೊಡಿಸುವುದಕ್ಕೆ 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಒಂದು ಹುದ್ದೆಗಾಗಿ ಈಗಾಗಲೇ ಮಹಿಳೆಯಿಂದ ಈಗಾಗಲೇ FDA ಶಿಲ್ಪ 35,000 ಲಂಚ ಪಡೆದಿದ್ದರು. ಉಳಿದ 15 ಸಾವಿರ ರೂಪಾಯಿ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಶಿಲ್ಪಾ ಬಿದ್ದಿದ್ದಾರೆ. FDA ಶಿಲ್ಪಾಳನ್ನು ಸದ್ಯ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.