ಕಲಬುರ್ಗಿ : ಕಲಬುರಗಿ ತಾಲೂಕಿನ ಬೇಲೂರು ಗ್ರಾಮದಿಂದ ಬಸವಕಲ್ಯಾಣಕ್ಕೆ ಮದುವೆಗೆ ಎಂದು ಹೋಗುವಾಗ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮಾವ ಸೊಸೆ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಸಂಸದ ‘ಪ್ರತಾಪ್ ಸಿಂಹ ಮುಠ್ಠಾಳ’ ಹೇಳಿಕೆ: ‘ಶಾಸಕ ಪ್ರದೀಪ್ ಈಶ್ವರ್’ ವಿರುದ್ಧ ‘ಮಾನನಷ್ಟ ಮೊಕದ್ದಮ್ಮೆ’ ದಾಖಲು
ಘಟನೆಯಲ್ಲಿ ಗುರುನಾಥ್(46) ಹಾಗೂ ಸಂಗೀತಾ (32) ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ. ಇದೆ ಘಟನೆಯಲ್ಲಿ ಲಕ್ಷ್ಮಣ್ ಎಂಬುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯಸಭಾ ಚುನಾವಣೆ: ಈವರೆಗೆ 39 ಶಾಸಕರಿಂದ ಮತದಾನ | Rajya Sabha election 2024
8 ಜನರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ
ಸೇಡಂ ತಾಲೂಕಿನ ಊಡಗಿಯಲ್ಲಿ ಭಾನುವಾರ ರಾತ್ರಿ 9 ಗಂಟೆಗೆ ಸುಮಾರು 8 ಜನರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಉದ್ರಿಕ್ತಗೊಂಡ ಅನ್ಯ ಕೋಮಿನ ಜನರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ರಾತ್ರಿ ಹತ್ತು ಗಂಟೆಗೆ ಪೊಲೀಸ್ ಠಾಣೆಯ ಮುಖ್ಯ ರಸ್ತೆ ತಡೆದು ಮತ್ತೊಂದು ಸಮಾಜದ ಮುಖಂಡರು ಹಾಗೂ ಯುವಕರು ಪ್ರತಿಭಟನೆ ಆರಂಭಿಸಿದರು.
ರಾಜ್ಯಸಭಾ ಚುನಾವಣೆ: ಈವರೆಗೆ 39 ಶಾಸಕರಿಂದ ಮತದಾನ | Rajya Sabha election 2024
ಮಲ್ಲಿಕಾರ್ಜುನ್ ಮತ್ತು ಅವರ ಸಹಚರರು ಹತ್ತರಿಂದ 15 ಜನ ಯುವಕರು ಸೇರಿ ಜವರ್ ಪಟೇಲ್(48), ಸೈಯದ್ ಹಮೀದ್(54), ಸೈಯದ್ ಮೋಸಿನ್(25), ರಸ್ತಾಗಿರ(22), ಚಾಂದ್ ಪಾಶಾ (25), ಸದ್ದಾಂ ಸೇರಿದಂತೆ ಒಟ್ಟು 8 ಜನರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದು, ಅವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.