ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕಂಟೆನರ್ ಬಿದ್ದು 4 ವರ್ಷದ ಬಾಲಕಿ ಹಾಗು ಆಕೆಯ ತಂದೆ ಸ್ಥಳದಲ್ಲೇ ಸಾವನ್ನಪ್ಪಿರುವ ಘೋರವಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಬಳಿ ಈ ಒಂದು ಘಟನೆ ನಡೆದಿದೆ.
ಹೌದು ಬೈಕ್ ಮೇಲೆ ಕಂಟೇನರ್ ಬಿದ್ದು ತಂದೆ ಮಗಳು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದ ತಂದೆ ವೆಂಕಟೇಶ ಹಾಗೂ ಮಗಳು ದೀಕ್ಷಿತ (4) ಸಾವನ್ನಪ್ಪಿದ್ದಾರೆ. ಮೃತ ವೆಂಕಟೇಶ್ ಪತ್ನಿ ರೂಪ ಅವರ ಸ್ಥಿತಿ ಚಿಂತಾ ಜನಕವಾಗಿದೆ.
ಮೃತರು ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. ಮಂಡಳಿಯಿಂದ ನಾಯನ ಹಳ್ಳಿಗೆ ಹೊರಟಿದಾಗ ಈ ದುರ್ಘಟನೆ ಸಂಭವಿಸಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಲ್ಲದೇ ಕಂಟೆನರ್ ಕೆಳಗಡೆ ಮತ್ತಿಬ್ಬರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಇಶಾ ಫೌಂಡೇಶನ್ ಗೆ ಹೋಗಿ ವಾಪಸ್ ಬರುವಾಗ ಈ ಘೋರವಾದ ದುರಂತ ಸಂಭವಿಸಿದೆ.