ಚಿಕ್ಕಬಳ್ಳಾಪುರ : ಬೆಂಗಳೂರು ಮೂಲದ ಯೋಗ ಶಿಕ್ಷಕಿಯನ್ನು ಅಪಹರಿಸಿ ಬಳಿಕ ಅತ್ಯಾಚಾರಕ್ಕೆ ಯತ್ನಿಸಿ ಗುಂಡಿ ತೋಡಿ ಜೀವಂತ ಸಮಾಧಿ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಚಿಕ್ಕಬಳ್ಳಾಪುರದ ಎಸ್ ಪಿ ಕುಶಲ್ ಚೌಕ್ಸೆ ಅವರು, ಯೋಗ ಶಿಕ್ಷಕಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯೋಗ ಶಿಕ್ಷಕಿಯನ್ನು ಅಪಹರಿಸಿ ಜೀವಂತ ಸಮಾಧಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ಮಹಿಳೆ ಯೋಗ ಶಿಕ್ಷಕಿಯ ಮೇಲೆ ಅತ್ಯಾಚಾರವಾಗಿಲ್ಲ. ದೂರುದಾರ ಮಹಿಳೆಗೆ ಆ ಸಂದರ್ಭದಲ್ಲಿ ಶವಾಸನ ನೆರವಾಗಿದೆ. ಆರೋಪಿಗಳು ಕತ್ತು ಹಿಸುಕಿದಾಗ ಉಸಿರಾಟ ನಿಲ್ಲಿಸಿದಂತೆ ಶಿಕ್ಷಕಿ ನಟಿಸಿದ್ದಾರೆ.
ಮಹಿಳೆಯ ಗುರುತು ಸಿಗದಂತೆ ಬಟ್ಟೆ ಮತ್ತು ಚಿನ್ನಾಭರಣ ಕಿತ್ತುಕೊಂಡಿದ್ದರು. ರಾತ್ರಿ ಆಗಿದ್ದರಿಂದ ಚಿಕ್ಕದಾಗಿ ಗುಂಡಿ ತೋಡಿ ಮುಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಪರಾರಿಯಾಗಿದ್ದ ಸತೀಶ್ ರೆಡ್ಡಿ, ಬಿಂದು, ರಮಣರೆಡ್ಡಿ, ರವಿಚಂದ್ರನ್, ನಾಗೇಂದ್ರ ಹಾಗೂ ಬಾಲಕನನ್ನು ಬಂಧಿಸಿರುವಾಗಿ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ?
ಬೆಂಗಳೂರು ನಗರದ ಯೋಗ ಶಿಕ್ಷಕಿಯನ್ನು ಅಪಹರಿಸಿ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಸಮೀಪ ನಡೆದಿದೆ. ನಾಲ್ಕು ಜನ ದುಷ್ಕರ್ಮಿಗಳ ತಂಡ ಈ ಯೋಗ ಶಿಕ್ಷಕಿಯನ್ನು ಬೆಂಗಳೂರಿನ ಕೆಆರ್ ಪುರಂನಲ್ಲಿ ಅಪಹರಣ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಂಜೆಯ ತನಕ ಬೆಂಗಳೂರನ್ನು ಸುತ್ತಾಡಿದ್ದಾರೆ.ಇದಾದ ಬಳಿಕ ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾರೆ.
ಈ ರೀತಿ ಒಂಟಿ ಮಹಿಳೆಯನ್ನು ಅಪಹರಣ ಮಾಡಿ, ಅತ್ಯಾಚಾರಕ್ಕೆ ಪ್ರಯತ್ನಿಸಿ ಆಕೆಯ ಮೇಲೆ ನಾಲ್ವರ ಗುಂಪು ಹಲ್ಲೆ ಮಾಡಿ, ಆಕೆಯನ್ನು ಜೀವಂತ ಸಮಾಧಿ ಮಾಡಿದ ವೇಳೆ, ಯುವತಿ ಪ್ರಾಣ ಹೋದಂತೆ ನಟಿಸಿದ್ದಾರೆ. ಆ ನಂತರ ಸಮಾಧಿಯಿಂದ ಎದ್ದು ಬಂದಿದ್ದಾರೆ.ತನ್ನನ್ನು ಅಪಹರಿಸಿದ್ದ ನಾಲ್ವರು ಅಲ್ಲಿಂದ ಹೊರಟ ನಂತರ, ಅರೆ ಬೆತ್ತಲಾಗಿಯೇ ರಾತ್ರಿಯಿಡಿ ನಡೆದುಕೊಂಡು ಸನಿಹದ ದಿಬ್ಬೂರಹಳ್ಳಿಗೆ ಶಿಕ್ಷಕಿ ಬಂದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅವರಿಗೆ ಬಟ್ಟೆ ನೀಡಿ ಸಂತ್ರೈಸಿ ನಂತರ ಠಾಣೆಗೆ ದೂರು ನೀಡಿದ್ದಾರೆ.
ಈ ಘಟನೆ ಅಕ್ಟೋಬರ್ 23ರಂದು ನಡೆದಿದ್ದು,ಯೋಗ ಶಿಕ್ಷಕಿಗೆ ಸಂತೋಷ್ ಎಂಬ ಪ್ರಿಯಕರನಿದ್ದು, ಆತನ ಪತ್ನಿಯಿಂದಲೇ ಈ ಕೃತ್ಯಕ್ಕೆ ಸುಪಾರಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಸಂತೋಷ ಎಂಬಾತನ ಜೊತೆ ಶಿಕ್ಷಕಿ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಶಿಕ್ಷಕಿ ಹತ್ಯೆಗೆ ಸಂ