ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಕಬ್ಬು ಕಟಾವು ಮಾಡುವ ಯಂತ್ರಕ್ಕೆ ಸಿಲುಕಿ ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ.
ಬಾರವ್ವ ಕೋಬಡಿ (60) ಹಾಗೂ ಲಕ್ಷ್ಮೀಬಾಯಿ ರುದ್ರಗೌಡರ (65) ಎಂದು ತಿಳಿದುಬಂದಿದೆ. ಕಟಾವು ವೇಳೆ ಮುಂದೆ ನೋಡದೆ ಡ್ರೈವರ್ ವಾಹನ ಚಲಾಯಿಸಿದ್ದಾನೆ ಇಬ್ಬರೂ ಮಹಿಳೆಯರ ತಲೆ ಯಂತ್ರದಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಕಬ್ಬಿಣ ಗದ್ದೆಗೆ ಕೂಲಿ ಕೆಲಸಕ್ಕೆ ಎಂದು ಇಬ್ಬರು ಮಹಿಳೆಯರು ಬಂದಿದ್ದರು.
ಚಾಲಕನ ನಿರ್ಲಕ್ಷದಿಂದ ಕೂಲಿಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ತಳದಲ್ಲಿ ಕುಟುಂಬ ಸದಸ್ಯರ ಆಕ್ರಂದನ ಇದೀಗ ಮುಗಿಲು ಮುಟ್ಟಿದೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ.








