ಮೈಸೂರು : ನಿನ್ನೆ ಮೈಸೂರಲ್ಲಿ ಹುಲಿ ದಾಳಿಯಿಂದ ರೈತ ರಾಜಶೇಖರ್ (58) ಸಾವನಪ್ಪಿದ್ದ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಮೈಸೂರು ಎಸ್ಪಿಗೆ ರಾಜ್ಯ ರೈತ ಸಂಘ ಲಿಖಿತವಾಗಿ ದೂರು ಸಲ್ಲಿಸಿದೆ.
ಹೌದು ಅರಣ್ಯ ಇಲಾಖೆ ನಿರ್ಲಕ್ಷಕ್ಕೆ ರೈತ ರಾಜಶೇಖರ್ ಬಲಿಯಾಗಿದ್ದಾನೆ. ಅರಣ್ಯಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಜ್ಯ ರೈತ ಸಂಘ ಲಿಖಿತವಾಗಿ ಎಸ್‌ಪಿಎ ದೂರು ನೀಡಿದ್ದಾರೆ. ಬೆಣ್ಣೆಗೆರೆಯಲ್ಲಿ ನಿನ್ನೆ ಹುಲಿ ದಾಳಿಗೆ ರೈತ ರಾಜಶೇಖರ್ ಬಲಿಯಾಗಿದ್ದ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬಣ್ಣಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಅಧಿಕಾರಿಗಳ ನಿರ್ಲಕ್ಷದಿಂದ ಈ ಘಟನೆ ಸಂಭವಿಸಿದೆ ಎಂದು ರೈತರು ಅಕ್ರೋಶ ಹೊರಹಾಕಿದ್ದಾರೆ.








