ಮೈಸೂರು : ತುಂಡಾಗಿ ಬಿದ್ದಿದಂತಹ ವಿದ್ಯುತ್ ಅಂತೇನೋ ತೊಳೆದು ಅವರು ರೈತ ಹಾಗೂ ಎರಡು ಜಾನುವಾರುಗಳು ಧಾರಣವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.
ಹೌದು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನಲ್ಲಿ ಮೊತ್ತ ಗ್ರಾಮದಲ್ಲಿ ಶೇಖರ್ (45)ಎನ್ನುವ ರೈತ ಸಾವನ್ನಪ್ಪಿದ್ದಾನೆ. ಜೊತೆಗೆ ಒಂದು ಹಸು ಒಂದು ಎತ್ತು ಕೂಡ ಸಾವನ್ನಪ್ಪಿವೆ. ನಿನ್ನೆ ಜಾನುವಾರುಗಳನ್ನು ಮೆಯಿಸಿಕೊಂಡು ಮನೆಗೆ ಬರುವಾಗ ಈ ಒಂದು ದುರಂತ ಸಂಭವಿಸಿದೆ.
ಘಟನೆಗೆ ಸಂಬಂಧಸಿದಂತೆ ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯುತ್ ತಂತಿಗಳು ಹಳೇದಾಗಿದೆ ಬದಲಿಸುವಂತೆ ಹಲವಾರು ಬಾರಿ ದೂರು ನೀಡಿದ್ದರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಚೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಇದೀಗ ಅಕ್ರೋಶ ಹೊರಹಾಕಿದ್ದಾರೆ.