ಯಾದಗಿರಿ : ಸಾಮಾನ್ಯವಾಗಿ ಪುರುಷರು ಆಗಿರಬಹುದು ಅಥವಾ ಮಹಿಳೆಯರು ಆಗಿರಬಹುದು, ಮದುವೆಯಾಗಿ ಸ್ವಲ್ಪ ದಿನ ಸಾಂಸಾರಿಕ ಜೀವನ ನಡೆಸಿದ ಬಳಿಕ ಆಮೇಲೆ ಸನ್ಯಾಸತ್ವ ಸ್ವೀಕರಿಸೋದನ್ನು ನೋಡಿದ್ದೇವೆ. ಅಲ್ಲದೆ ಕೆಲವರು ಬಾಲ ಬ್ರಹ್ಮಚಾರಿಯಾಗಿಯು ಇದ್ದಿದನ್ನು ನೋಡಿದ್ದೇವೆ. ಆದರೆ ಯಾದಗಿರಿಯಲ್ಲಿ ಕೋಟ್ಯಾಧೀಶ್ವರನ ಪುತ್ರಿಯಾದ ಯುವತಿಯೋರ್ವಳು ಇದೀಗ ಜೈನ ಧರ್ಮ ಸ್ವೀಕರಿಸುವ ಮೂಲಕ 26ನೇ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ್ದಾಳೆ.
ಹೌದು ಸನ್ಯಾಸಿ ಜೀವನದ ಕಡೆ ಪಯಣ ಬೆಳೆಸಿದ ಕೋಟ್ಯಾಧಿಶ್ವರನ ಪುತ್ರಿ. ಯುವತಿ 26ನೇ ವಯಸ್ಸಿಗೆ ಆಡಂಬರದ ಜೀವನ ಸಾಕಾಗಿ ಇದೀಗ ಸನ್ಯಾಸತ್ವಕ್ಕೆ ಮೊರೆ ಹೋಗಿದ್ದಾಳೆ. ಯಾದಗಿರಿಯ ಜಿಲ್ಲೆಯ ಜೈನ ಬಡಾವಣೆಯ ನಿವಾಸಿ ನಿಖಿತಾ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಯಾದಗಿರಿಯ ಜೈನ ಬಡಾವಣೆಯ ನಿವಾಸಿ ನಿಖಿತಾ ನರೇಂದ್ರ ಗಾಂಧಿ ಮತ್ತು ಸಂಗೀತ ಗಾಂಧಿ ಪುತ್ರಿ ಎಂದು ತಿಳಿದುಬಂದಿದೆ.
ನಿಖಿತ ಇದೀಗ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಕಠಿಣ ನಿಯಮ ಪಾಲನೆ ಕಡ್ಡಾಯ
1) ಸನ್ಯಾಸತ್ವ ಸ್ವೀಕರಿಸಿದ ಮೇಲೆ ಸರಳವಾಗಿ ಜೀವನ ಸಾಗಿಸಬೇಕು.
2) ಒಂದೇ ಜಾಗದಲ್ಲಿ ಎರಡು ದಿನಕ್ಕಿಂತ ಹೆಚ್ಚು ನಿಲುವಂತಿಲ್ಲ.
3) ಎಲ್ಲೇ ಹೋದರು ಕೂಡ ಕಾಲ್ನಡಿಗೆಯಲ್ಲಿ ಸಂಚರಿಸಬೇಕು.
4) ಸನ್ಯಾಸತ್ವ ಸ್ವೀಕರಿಸಿದ ಬಳಿಕ ತಲೆಯ ಕೂದಲು ಕೀಳುತ್ತಾರೆ. ಕೈಯಿಂದಲೇ ಕೂದಲು ಕಿತ್ತು ತಲೆ ಬೋಳು ಮಾಡುತ್ತಾರೆ.
5) ಕಳೆದ 7 ವರ್ಷದಿಂದ ಸನ್ಯಾಸಿಯಾಗಲು ನಿಕಿತಾ ಬಯಸಿದ್ದಾಳೆ.
6) ಸನ್ಯಾಸತ್ವ ಸ್ವೀಕರಿಸಿದ ಬಳಿಕ ಕಠಿಣ ದಾರಿಯನ್ನು ಹಿಡಿಯಬೇಕು.
7) ಪಾದರಕ್ಷೆ ಹಾಕುವಂತಿಲ್ಲ ಸಂಚಾರಕ್ಕೆ ವಾಹನ ಬಳಸುವಂತಿಲ್ಲ.