ಹೈದ್ರಾಬಾದ್ : ಖ್ಯಾತ ಗಾಯಕಿ ಮಂಗ್ಲಿ ಅವರ ಹುಟ್ಟು ಹಬ್ಬದ ಪಾರ್ಟಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ವಿದೇಶಿ ಮದ್ಯ, ಗಾಂಜಾ ಸೇವನೆ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ.
ಹೌದು ಮಂಗ್ಲಿ ಹುಟ್ಟು ಹಬ್ಬದ ಪಾರ್ಟಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಹೈದರಾಬಾದ್ ನಲ್ಲಿ ದಾಳಿ ಮಾಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮಂಗ್ಲಿ ಬರ್ತ್ಡೇ ಹಿನ್ನೆಲೆ ಹಲವರಿಗೆ ಮಾದಕ ದ್ರವ್ಯ ಪಾರ್ಟಿ ಆಯೋಜನೆ ಮಾಡಲಾಗಿದ್ದು, ಚೆವೆಲ್ಲ ತ್ರಿಪುರ ರೆಸಾರ್ಟ್ ನಲ್ಲಿ ಮಂಗ್ಲಿ ಬರ್ತಡೇ ಪಾರ್ಟಿ ನಡೆಯುತ್ತಿತ್ತು ಹಲವರು ಗಾಂಜಾ ಸೇವನೆ ಮಾಡಿರುವುದು ಬಯಲಾಗಿದೆ. ಅಲ್ಲದೇ ವಿದೇಶಿ ಮದ್ಯವನ್ನು ಪೊಲೀಸರು ವಶಕೆಕ್ ಪಡೆದುಕೊಂಡಿದ್ದಾರೆ.