ಬಳ್ಳಾರಿ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳು ಇಡೀ ರಾಜ್ಯವನ್ನೇ ಬೆಚ್ಚಿ ಬಿಳಿಸಿತ್ತು. ಇದೀಗ ಬಳ್ಳಾರಿಯಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಕಲಿ ಚಿನ್ನ ಇಟ್ಟು ಬ್ಯಾಂಕ್ ಸಿಬ್ಬಂದಿಗಳೇ ಲಕ್ಷಾಂತರ ರೂಪಾಯಿ ವಂಚನೆ ಎಸಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದ್ದು, ನಕಲಿ ಚಿನ್ನ ಇಟ್ಟು ವಂಚನೆ ಎಸಗಿರುವ ಆಕ್ಸಿಸ್ ಬ್ಯಾಂಕ್ ನ ಮೂವರು ಸಿಬ್ಬಂದಿಗಳ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ ಮೂವರು ಸಿಬ್ಬಂದಿಗಳ ವಿರುದ್ಧ FIR ದಾಖಲಾಗಿದೆ. ಆಕ್ಸಿಸ್ ಬ್ಯಾಂಕ್ ನ ಅಡಮಾನ ವಿಭಾಗದ ಮುಖ್ಯಸ್ಥ ಕಾರ್ತಿಕ್, ಶ್ರೀನಿವಾಸ್ ಹಾಗೂ ಅಕ್ಕಸಾಲಿಗ ರಾಮನಗೌಡ ವಿರುದ್ಧ FIR ದಾಖಲಾಗಿದೆ.
ಕಳೆದ ವರ್ಷ ಬೇರೆ ಶಾಖೆಗೆ ಆರೋಪಿಗಳು ವರ್ಗಾವಣೆಗೊಂಡಿದ್ದರು. ವರ್ಗಾವಣೆಯಾಗಿ ಒಂದು ವರ್ಷದ ಬಳಿಕ ಮೋಸ ಮಾಡಿರುವುದು ಪತ್ತೆಯಾಗಿದೆ. ಹೇಮಾವತಿ ಎಂಬುವರ ಹೆಸರಿನಲ್ಲಿ 10.35 ಲಕ್ಷ ಸಾಲ ನೀಡಿದ್ದಾರೆ. 339 ಗ್ರಾಂ ನಕಲಿ ಚಿನ್ನ ಅಡವಿಟ್ಟು 10.35 ಲಕ್ಷ ಸಾಲ ನೀಡಿದ್ದಾರೆ. ಬಳಿಕ ಆಡಿಟ್ ಮಾಡುವಾಗ ನಕಲಿ ಚಿನ್ನಕ್ಕೆ ಸಾಲ ನೀಡಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಯಾಸಿನ್ ಎಂಬುವವರ 42 ಗ್ರಾಂ ಚಿನ್ನ ಅಡವಿಟ್ಟಿದ್ದರು. ವರ್ಷದ ಬಳಿಕ ಸಾಲು ತೀರಿಸಲು ಬಂದಾಗ ಖಾತೆ ಕ್ಲೋಸ್ ಮಾಡಿದ್ದರು.
ಅಕೌಂಟ್ ಕ್ಲೋಸ್ ಮಾಡಿ ಮೂವರು ಆರೋಪಿಗಳು ಚಿನ್ನ ಎಗರಿಸಿದ್ದರು. ಬಸವರಾಜ್ ಎಂಬುವವರು ಚಿನ್ನದ ಸಾಲ ಕಟ್ಟಿದ್ದರೂ ಸಹ ಚಿನ್ನ ಎಗರಿಸಿದ್ದರು. 4.2 ಗ್ರಾಂ ಉಂಗುರ ಎಗರಿಸಿದ್ದ ಕಾರ್ತಿಕ್ ಶ್ರೀನಿವಾಸ್ ಹಾಗೂ ರಾಮನಗೌಡ ಮೂವರು ಆರೋಪಿಗಳಿಂದ 19 ಲಕ್ಷ ರೂಪಾಯಿ ವಂಚನೆ ಎಸಗಲಾಗಿದೆ. ಇದೀಗ ಮೂವರ ವಿರುದ್ಧ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.