ವಿಜಯನಗರ : ವಿಜಯನಗರದಲ್ಲಿ ಪೊಲೀಸರು ಭರ್ಜರಿ ಕಾರ್ಯ ಆಚರಣೆ ನಡೆಸಿದ್ದು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ ಬಾಲಕ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಿ 500 ರೂ. ಮುಖ ಬೆಲೆಯ ಒಟ್ಟು 40,000 ಮೊತ್ತದ 80 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರಸೀಕೆರೆ ಗ್ರಾಮದಲ್ಲಿ ನಡೆದ ಶ್ರೀ ದಂಡಿ ದುರ್ಗಮ್ಮ ದೇವಸ್ಥಾನದ ಜಾತ್ರಾ ಸಮಯದಲ್ಲಿ ಆಟಿಕೆ ನಡೆಸುವ ಶ್ರೀಮಾತ ಅಮ್ಯೂಸ್‌ಮೆಂಟ್ ಪಾರ್ಕ್ ಅಂಗಡಿಯಲ್ಲಿ ಅಪರಿಚಿತರು 500 ರೂ. ಮುಖ ಬೆಲೆಯ ಎರಡು ನೋಟುಗಳನ್ನು ಚಲಾವಣೆ ಮಾಡಿದ್ದರು.ಈ ಕುರಿತು ಆಟಿಕೆ ಅಂಗಡಿ ಮಾಲೀಕ ವೀರಭದ್ರಪ್ಪ ಎಚ್.ಕೆ ಅವರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಅರಸೀಕೆರೆ ಪೊಲೀಸರು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಅರಸೀಕೆರೆ ಕೆ.ಮಹಮ್ಮದ್ ರಿಹಾನ್ (18), ಉಚ್ಚಂಗಿದುರ್ಗದ ಮುಹಮ್ಮದ್ ಅಖಿಲ್ (18), ಆರಸೀಕೆರೆ ನರೇಂದ್ರ ಪ್ರಸಾದ್ ಎನ್.ಪಿ (19), ಕೂಡ್ಲಿಗಿಯ ಅಜಾದ್ ನಗರದ ಬಿ ಬಾಬು (36), ಮೊಳಕಾಲ್ಲೂರು ತಾಲ್ಲೂಕಿನ ರಾಂಪುರ ಗ್ರಾಮ ಟಿ ಕುಮಾರಸ್ವಾಮಿ (43) ಹಾಗೂ ಒಬ್ಬ ಬಾಲಕ ಎಂದು ತಿಳಿದು ಬಂದಿದೆ.ಈ ಕುರಿತು ಆಟಿಕೆ ಅಂಗಡಿ ಮಾಲೀಕ ವೀರಭದ್ರಪ್ಪ ಎಚ್.ಕೆ ಅವರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಅರಸೀಕೆರೆ ಪೊಲೀಸರು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.








