ಬೆಂಗಳೂರು : ಕಳೆದ ಜನೆವರಿ 9 ರಂದು ಕರ್ನಾಟಕ ಸರ್ಕಾರದ ಮುಂದೆ ಶರಣಾಗಿದ್ದ ಮಾಜಿ ನಕ್ಸಲರನ್ನು ಇದೀಗ ಬೆಂಗಳೂರಿನ NIA ಕೋರ್ಟ್ ಖುಲಾಸೆಗೊಳಿಸಿದೆ. 3 ಪ್ರಕರಣಗಳಲ್ಲಿ ಸಾಕ್ಷಿ ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಮಾಜಿ ನಕ್ಸಲರನ್ನು ಇದೀಗ ಕೋರ್ಟ್ ಖುಲಾಸೆಗೊಳಿಸಿದೆ.
ಮುಂಡಗರು ಲತಾ, ರವೀಂದ್ರ, ಸಾವಿತ್ರಿ ಮತ್ತು ಜ್ಯೋತಿಯನ್ನು ಇದೀಗ ಬೆಂಗಳೂರಿನ NIA ಕೋರ್ಟ್ ಖುಲಾಸೆಗೊಳಿಸಿದೆ. ಸಾಕ್ಷಿ ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಇದೀಗ ಇವರನ್ನು ಕೋರ್ಟ್ ಖುಲಾಸೆಗೊಳಿಸಿದೆ. ಇತ್ತೀಚಿಗೆ ಮಾಜಿ ನಕ್ಸಲರಾದಂತ ಮುಂಡಗಾರು ಲತಾ, ರವೀಂದ್ರ ಅಲಿಯಾಸ್ ಕೋಟೆಹೋಂಡ ರವಿ, ಸಾವಿತ್ರಿ ಅಲಿಯಾಸ್ ಉಷಾ, ವನಜಾಕ್ಷಿ ಅಲಿಯಾಸ್ ಜ್ಯೋತಿ ಅಲಿಯಾಸ್ ಕಲ್ಪನಾ NIA ಕೋರ್ಟ್ ಮುಂದೆ ಶರಣಾಗಿದ್ದರು.
ಚಿಕ್ಕಮಂಗಳೂರು ತಣಿಕೋಡು ಅರಣ್ಯ ಚೆಕ್ಪೋಸ್ಟ್ ಧ್ವಂಸ ಪ್ರಕರಣ, ಲೇವಾದೇವಿದಾರ ಗಂಗಾಧರ ಶೆಟ್ಟಿ ಅಲಿಯಾಸ್ ಕಿರಣ್ ಶೆಟ್ಟಿ ಬೈಕ್ ಗೆ ಬೆಂಕಿ ಹಚ್ಚಿದ್ದ ಪ್ರಕರಣ, ಬುಕ್ಕಡಿಬೈಲುವಿನಲ್ಲಿ ಸಾರ್ವಜನಿಕ ಸಭೆ ನಡೆಸಿದ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ 3 ಪ್ರಕರಣಗಳು ದಾಖಲಾಗಿದ್ದವು. ಐಪಿಸಿ ಹಾಗೂ ಯುಎಪಿಎ ಆಕ್ಟ್ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ 3 ಪ್ರಕರಣದಲ್ಲಿ ಮಾಜಿ ನಕ್ಸಲರನ್ನು ಖುಲಾಸೆಗೊಳಿಸಿ ಎನ್ಐಎ ವಿಶೇಷ ನ್ಯಾಯಾಲಯದ ಸಿ.ಎಂ ಗಂಗಾಧರ್ ಅವರು ಆದೇಶ ಹೊರಡಿಸಿದ್ದಾರೆ.