ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಒಂದೇ ಜಿಮ್ ನಲ್ಲಿ ಎರಡು ಲವ್ ಜಿಹಾದ್ ಪ್ರಕರಣ ನಡೆದಿದ್ದು ಈಗಾಗಲೇ ಮೊದಲ ಪ್ರಕರಣದಲ್ಲಿ ಆರೋಪಿ ಸಮೀರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಇನ್ನು ಎರಡನೇ ಪ್ರಕರಣಕ್ಕೆ ಇದೀಗ ಸಂತ್ರಸ್ತೇ ಯುವತಿ ಸ್ಫೋಟಕ ಹೇಳಿಕೆ ನೀಡಿದ್ದು, ಇದರ ಹಿಂದೆ ಕಾಂಗ್ರೆಸ್ ಮುಖಂಡನ ಕೈವಾಡ ಇದೆ ಎಂದು ಯುವತಿ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದ್ದಾಳೆ.
ಇದೀಗ ಯುವತಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆರಡು ವಿಡಿಯೋಗಳನ್ನು ಯುವತಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮುಖಂಡನ ಕೈವಾಡ ಇದೆ ಎಂದು ಆರೋಪ ಮಾಡಲಾಗಿದೆ. ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ದಾಖಲಾಗಿರುವ ಎರಡನೇ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯು ಮತ್ತೊಮ್ಮೆ ವಿಡಿಯೋ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳ ಸತ್ಯಾಸತ್ಯತೆಯನ್ನು ಅವರು ಬಿಚ್ಚಿಟ್ಟಿದ್ದಾರೆ.ನಿನ್ನೆ ವೈರಲ್ ಆಗಿರುವ ವಿಡಿಯೋಗಳು ಸುಮಾರು ಒಂದು ವರ್ಷದ ಹಿಂದಿನವು. ಆರೋಪಿ ಮುಪಿಜ್ ಮಿಯಾನವರ ನನ್ನ ಖಾಸಗಿ ಕ್ಷಣಗಳ ವಿಡಿಯೋವನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಆತ ಹೇಳಿದಂತೆ ನಾನು ವಿಡಿಯೋದಲ್ಲಿ ಮಾತನಾಡದಿದ್ದರೆ ಆ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಆತನ ಒತ್ತಾಯಕ್ಕೆ ಮಣಿದು ನಾನು ಅಂದು ಆತನ ಪರವಾಗಿ ವಿಡಿಯೋ ಮಾಡಿದ್ದೆ. ಆದರೆ ಈಗ ಅದನ್ನೇ ಬಳಸಿಕೊಂಡು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಎಂದು ಯುವತಿ ಅಳಲು ತೋಡಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ಮುಖಂಡನ ಕೈವಾಡ ಬಗ್ಗೆ ಹೇಳಿರುವ ಯುವತಿ, ಅಣ್ಣಾ, ನನಗೆ ಅನ್ಯಾಯವಾದಾಗ ಬಂದು ನನ್ನ ನೋವನ್ನು ಒಮ್ಮೆಯೂ ಕೇಳದ ನೀವು, ಈಗ ಹಳೆ ವಿಡಿಯೋಗಳನ್ನು ವೈರಲ್ ಮಾಡಿಸುತ್ತಿದ್ದೀರಿ. ನಿಮ್ಮ ಮನೆಯವರಿಗೆ ಅಥವಾ ನಿಮ್ಮ ಮಗಳಿಗೆ ಹೀಗಾಗಿದ್ದರೆ ನೀವು ಸುಮ್ಮನಿರುತ್ತಿದ್ದೀರಾ? ಎಂದು ಯುವತಿ ಆಕ್ರೋಶಭರಿತವಾಗಿ ಪ್ರಶ್ನಿಸಿದ್ದಾರೆ.








