ಬೆಂಗಳೂರು : ಖಾಸಗಿ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿರ್ಲಕ್ಷದಿಂದ ಬಿಎಂಟಿಸಿ ಬಸ್ಗೆ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಶ್ಚಂದ್ರ ಘಾಟ್ ಬಳಿ ನಡೆದಿದೆ.ಘಟನೆ ನಂತರ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
ಮೃತ ವಿದ್ಯಾರ್ಥಿನಿಯನ್ನು ಕುಸುಮಿತ (21) ಎಂದು ಹೇಳಲಾಗುತ್ತಿದ್ದು, ಕಾಲೇಜಿಗೆಂದು ತೆರಳುತ್ತಿದ್ದಾಗ ಮೆಟ್ರೋ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿದ್ದಳು. ನಂತರ ಬೈಕ್ ಹಿಂತೆಗೆದುಕೊಳ್ಳುತಿದ್ದ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ ಬಿಎಂಟಿಸಿ ಬಸ್ ಹಿಂಬದಿ ಚಕ್ರಕ್ಕೆ ಬೈಕ್ ತಾಗಿ ಆಕೆ ಮೇಲೆ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದಳು. ಗಾಯಗೊಂಡ ಆಕೆಯನ್ನ ತಕ್ಷಣ ಆಸ್ಪತ್ರೆಗೆ ರವಾನಿಸುತ್ತಿರುವಾಗ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾಳೆ.
ಘಟನೆಯು ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.ಪದೇಪದೇ ಈ ಘಟನೆಗಳು ಸಂಭವಿಸುತ್ತವೆ ಇದಕ್ಕೆ ಕಾರಣ ಏನು ಇದುವರೆಗೂ ಪತ್ತೆಯಾಗಿಲ್ಲ.ಘಟನೆಗೆ ಸಂಬಂಧಪಟ್ಟಂತೆ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.