ಮಂಡ್ಯ : ಮಂಡ್ಯದಲ್ಲಿ ಘೋರ ದುರಂತ ಒಂದು ನಡೆದಿದ್ದು ಈಜು ಬಾರದೇ ಇದ್ದರೂ ಮಂಡ್ಯದ ವಿಸಿನಾಲಿಗೆ ಇಳಿದು ಯುವಕನೊಬ್ಬ ನಿರೂಪಳಾಗಿರುವ ಘಟನೆ ಮಂಡ್ಯ ಮಂಡ್ಯ ತಾಲೂಕಿನ ಯಲಿಯೂರು ಬಳಿ ವಿಸಿ ನಾಲೆಯ ಬಳಿ ಈ ಒಂದು ಘಟನೆ ಸಂಭವಿಸಿದೆ.
ಈಜಲು ಬಾರದೆ ಇದ್ದರೂ ಈಜಲು ಹೋದ ಯಶ್ವಂತ್ (22) ಎನ್ನುವ ಯುವಕ ನೀರು ಪಾಲಾಗಿದ್ದಾನೆ. ಅನಿಲ್ ಕುಮಾರ್ ಉಮಾ ದಂಪತಿ ಪುತ್ರ ಯಶ್ವಂತ್ ಎಂದ್ ತಿಳಿದುಬಂದಿದೆ. ಯಶ್ವಂತ್ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ನಿವಾಸಿ ಎಂದು ಹೇಳಲಾಗುತ್ತಿದೆ.
ಕಾಲೇಜಿನಿಂದ ಮಧ್ಯಾಹ್ನ ಸ್ನೇಹಿತರೊಂದಿಗೆ ಯಶವಂತ್ ಈಜಲು ತೆರಳಿದ್ದ. ಕಾವೇರಿ ಇಂಜಿನಿಯರ್ ಕಾಲೇಜಿನಲ್ಲಿ ಯಶವಂತ್ ಬಿಇ ಓದುತ್ತಿದ್ದ. ಈಜು ಬಾರದಿದ್ದರೂ ನಾಲೇಗೆ ಇಳಿದಿದ್ದ. ಯಶವಂತ ಹಾಗೂ ಇಬ್ಬರು ಸ್ನೇಹಿತರು ನಾಲೆಯ ನೀರಿನ ರಭಸಕ್ಕೆ ಮೂವರು ಯುವಕರು ಕೊಚ್ಚಿ ಹೋಗುತ್ತಿದ್ದರು
ಈ ವೇಳೆ ಸ್ಥಳೀಯರು ಇಬ್ಬರು ಯುವಕರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಯಶವಂತ ನೀರು ಪಾಲಾಗಿದ್ದಾನೆ ಅಗ್ನಿಶಾಮಕ ದಳದ ಸಿಬ್ಬಂದಿ ಇದ್ದ ಇದೀಗ ಯಶವಂತ್ ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆದಿದೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.