Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಕೋಚ್ ವಿರುದ್ಧ ಸುಮಿತ್ ಅಂಟಿಲ್ ಗಂಭೀರ ಆರೋಪ: ಪ್ಯಾರಾಲಿಂಪಿಕ್ ಚಾಂಪಿಯನ್ ಪರ ನಿಂತ ನೀರಜ್ ಚೋಪ್ರಾ : ಕಠಿಣ ಕ್ರಮಕ್ಕೆ ಆಗ್ರಹ

18/04/2026 9:03 AM

BREAKING : ರಾಜ್ಯದ ಜನತೆಗೆ ಕರೆಂಟ್ ಶಾಕ್ : ಪ್ರತಿ ಯುನಿಟ್ ಗೆ 56 ಪೈಸೆ ದರ ಏರಿಕೆ!

18/04/2026 8:58 AM

EWS ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇಲ್ಲ:’SC, ST, OBC ವರ್ಗಗಳೊಂದಿಗೆ ಸಮಾನತೆ ಕೋರುವಂತಿಲ್ಲ’:ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

18/04/2026 8:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದ ಜನತೆಗೆ ಕರೆಂಟ್ ಶಾಕ್ : ಪ್ರತಿ ಯುನಿಟ್ ಗೆ 56 ಪೈಸೆ ದರ ಏರಿಕೆ!
KARNATAKA

BREAKING : ರಾಜ್ಯದ ಜನತೆಗೆ ಕರೆಂಟ್ ಶಾಕ್ : ಪ್ರತಿ ಯುನಿಟ್ ಗೆ 56 ಪೈಸೆ ದರ ಏರಿಕೆ!

By kannadanewsnow0518/04/2026 8:58 AM

ಬೆಂಗಳೂರು : ಬೆಸ್ಕಾಂ ಹಾಗೂ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು (ಸೆಸ್ಕ್ ಮೈಸೂರು) ಗ್ರಾಹಕರಿಗೆ ದರ ಏರಿಕೆಯ ಶಾಕ್‌ ನೀಡಲಾಗಿದೆ. 2024-25ನೇ ಸಾಲಿನಲ್ಲಿ ಉಂಟಾಗಿರುವ ಆದಾಯ ಕೊರತೆ ತುಂಬಿಕೊಳ್ಳಲು 2026-27ನೇ ಸಾಲಿನಲ್ಲಿ ಬೆಸ್ಕಾಂ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಸೆಸ್ಕ್‌ ಪ್ರತಿ ಯುನಿಟ್‌ಗೆ 15 ಪೈಸೆಯಂತೆ ಗ್ರಾಹಕರಿಂದ ಹೆಚ್ಚುವರಿಯಾಗಿ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ.

2026-27ನೇ ಸಾಲಿಗೆ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್‌ ಸರರಬಾಜು ಕಂಪೆನಿ ಗ್ರಾಹಕರಿಗೆ 15 ಪೈಸೆ ಹೊರೆ ಬಿದ್ದಿದೆ. ಬೆಸ್ಕಾಂ ಹಾಗೂ ಸೆಸ್ಕ್​​ನ ಗೃಹ ಜ್ಯೋತಿ ಫಲಾನುಭವಿಗಳಿಗೆ ಈ ಹೊರೆ ಬೀಳುವುದಿಲ್ಲ. ಆದರೆ, ಇತರೆ ಗ್ರಾಹಕರಿಗೆ ದರ ಏರಿಕೆಯ ಹೊರೆ ಆಗಲಿದೆ. ಗೃಹ ಜ್ಯೋತಿ ಗ್ರಾಹಕರ ಪರವಾಗಿ ಈ ಹೆಚ್ಚುವರಿ ದರ ಏರಿಕೆ ಹೊರೆ ಸರ್ಕಾರದ ಮೇಲೆ ಬೀಳಲಿದೆ.‌ ಈ ಆದೇಶ 2026 ಮೇ 1ರಿಂದ 2027ರ ಏಪ್ರಿಲ್‌ 31ರವರೆಗೆ ಬಳಕೆಯಾಗುವ ವಿದ್ಯುತ್‌ ಬಿಲ್‌ಗೆ ಅನ್ವಯವಾಗಲಿದೆ.

ಇತ್ತ, 2024-25ರಲ್ಲಿ ನಿರ್ವಹಣಾ ವೆಚ್ಚಕ್ಕಿಂತ ಹೆಚ್ಚು ಆದಾಯ ಸಂಗ್ರಹ ಮಾಡಿರುವ ಹೆಸ್ಕಾಂ (ಹುಬ್ಬಳ್ಳಿ) ತನ್ನ ಗ್ರಾಹಕರಿಗೆ 2026-27ನೇ ಸಾಲಿನಲ್ಲಿ ಪ್ರತಿ ತಿಂಗಳು ಪ್ರತಿ ಯುನಿಟ್‌ಗೆ 10 ಪೈಸೆಯಂತೆ ಮರುಪಾವತಿ ಮಾಡಬೇಕು. ಜೆಸ್ಕಾಂ (ಕಲಬುರಗಿ) ಗ್ರಾಹಕರಿಗೆ 10 ಪೈಸೆ, ಮಂಗಳೂರಿನ ಮೆಸ್ಕಾಂ ಗ್ರಾಹಕರಿಗೆ 9 ಪೈಸೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸರಬರಾಜು ಸಹಕಾರ ಸೊಸೈಟಿಯ (ಹೆಚ್‌ಆರ್‌ಇಸಿಎಸ್) ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ಬರೋಬ್ಬರಿ 155 ಪೈಸೆಯಷ್ಟು ಹಣವನ್ನು ಮರುಪಾವತಿ ಮಾಡಬೇಕು ಎಂದು ಆದೇಶಿಸಿದೆ.

ಆಯೋಗದ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಆದೇಶದ ಪ್ರಕಾರ, 2024-25ನೇ ಸಾಲಿನಲ್ಲಿ ಬೆಸ್ಕಾಂನ ವಾರ್ಷಿಕ ಆದಾಯದ ಅಗತ್ಯತೆ 34,087.94 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಆದರೆ, ವಿದ್ಯುತ್ ಮಾರಾಟದಿಂದ ನಿರೀಕ್ಷಿತ ಆದಾಯ 32,019.56 ಕೋಟಿ ರೂ. ಮಾತ್ರ. ಇದರಿಂದಾಗಿ ಬೆಸ್ಕಾಂಗೆ ಒಟ್ಟು 2,068.38 ಕೋಟಿ ರೂ.ಗಳ ಭಾರಿ ಆದಾಯದ ಕೊರತೆ ಉಂಟಾಗಿದೆ ಎಂದು ಆಯೋಗ ಗುರುತಿಸಿದೆ.

ಈ 2,068.38 ಕೋಟಿ ರೂ.ಗಳ ಕೊರತೆಯನ್ನು ಬೆಸ್ಕಾಂ ವ್ಯಾಪ್ತಿಯ ಸಕ್ರಿಯ ಗ್ರಾಹಕರಿಂದಲೇ ವಸೂಲಿ ಮಾಡಲು ಕೆಇಆರ್‌ಸಿ ನಿರ್ಧರಿಸಿದೆ. ಈ ನಷ್ಟವನ್ನು ಒಮ್ಮೆಲೇ ಹೇರುವ ಬದಲು, 2026-27ನೇ ಆರ್ಥಿಕ ವರ್ಷದಲ್ಲಿ ವಸೂಲಿ ಮಾಡಲು ಆದೇಶಿಸಲಾಗಿದೆ. ಇದರ ಪರಿಣಾಮವಾಗಿ, 2026-27ನೇ ಸಾಲಿನಲ್ಲಿ ಗ್ರಾಹಕರು ತಾವು ಬಳಸುವ ಪ್ರತಿ ಯೂನಿಟ್ ವಿದ್ಯುತ್‌ಗೆ ಹೆಚ್ಚುವರಿಯಾಗಿ 56 ಪೈಸೆ ಪಾವತಿಸಬೇಕಾಗುತ್ತದೆ.

Share. Facebook Twitter LinkedIn WhatsApp Email

Related Posts

ಮಧ್ಯರಾತ್ರಿ ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಹೊಸ ಅತಿಥಿಗಳು : ವಿಮಾನ ನಿಲ್ದಾಣಕ್ಕೆ ಬಂದ 4 ಚೀತಾ ಬರಮಾಡಿಕೊಂಡ ಈಶ್ವರ ಖಂಡ್ರೆ

18/04/2026 8:48 AM1 Min Read

ಈ ಬಾರಿಯ ಅಕ್ಷಯ ತೃತೀಯ ಯಾವಾಗ? ಆ ದಿನದಂದು ವಿಶೇಷ ದಾನ ಏಕೆ ಮಾಡಬೇಕು? ಇಲ್ಲಿದೆ ಕುತೂಹಲಕಾರಿ ಮಾಹಿತಿ

18/04/2026 8:44 AM5 Mins Read

ಅಯ್ಯಪ್ಪ ಸ್ವಾಮಿಯ ನಿಜವಾದ ಕಥೆ! ಶಬರಿಮಲೆಯ ಈ ನಿಗೂಢ ಸತ್ಯಗಳು ನಿಮಗೆ ಗೊತ್ತೇ

18/04/2026 8:25 AM4 Mins Read
Recent News

​ಕೋಚ್ ವಿರುದ್ಧ ಸುಮಿತ್ ಅಂಟಿಲ್ ಗಂಭೀರ ಆರೋಪ: ಪ್ಯಾರಾಲಿಂಪಿಕ್ ಚಾಂಪಿಯನ್ ಪರ ನಿಂತ ನೀರಜ್ ಚೋಪ್ರಾ : ಕಠಿಣ ಕ್ರಮಕ್ಕೆ ಆಗ್ರಹ

18/04/2026 9:03 AM

BREAKING : ರಾಜ್ಯದ ಜನತೆಗೆ ಕರೆಂಟ್ ಶಾಕ್ : ಪ್ರತಿ ಯುನಿಟ್ ಗೆ 56 ಪೈಸೆ ದರ ಏರಿಕೆ!

18/04/2026 8:58 AM

EWS ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇಲ್ಲ:’SC, ST, OBC ವರ್ಗಗಳೊಂದಿಗೆ ಸಮಾನತೆ ಕೋರುವಂತಿಲ್ಲ’:ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

18/04/2026 8:49 AM

ಮಧ್ಯರಾತ್ರಿ ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಹೊಸ ಅತಿಥಿಗಳು : ವಿಮಾನ ನಿಲ್ದಾಣಕ್ಕೆ ಬಂದ 4 ಚೀತಾ ಬರಮಾಡಿಕೊಂಡ ಈಶ್ವರ ಖಂಡ್ರೆ

18/04/2026 8:48 AM
State News
KARNATAKA

BREAKING : ರಾಜ್ಯದ ಜನತೆಗೆ ಕರೆಂಟ್ ಶಾಕ್ : ಪ್ರತಿ ಯುನಿಟ್ ಗೆ 56 ಪೈಸೆ ದರ ಏರಿಕೆ!

By kannadanewsnow0518/04/2026 8:58 AM KARNATAKA 2 Mins Read

ಬೆಂಗಳೂರು : ಬೆಸ್ಕಾಂ ಹಾಗೂ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು (ಸೆಸ್ಕ್ ಮೈಸೂರು) ಗ್ರಾಹಕರಿಗೆ ದರ ಏರಿಕೆಯ ಶಾಕ್‌ ನೀಡಲಾಗಿದೆ. 2024-25ನೇ…

ಮಧ್ಯರಾತ್ರಿ ದ.ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಹೊಸ ಅತಿಥಿಗಳು : ವಿಮಾನ ನಿಲ್ದಾಣಕ್ಕೆ ಬಂದ 4 ಚೀತಾ ಬರಮಾಡಿಕೊಂಡ ಈಶ್ವರ ಖಂಡ್ರೆ

18/04/2026 8:48 AM

ಈ ಬಾರಿಯ ಅಕ್ಷಯ ತೃತೀಯ ಯಾವಾಗ? ಆ ದಿನದಂದು ವಿಶೇಷ ದಾನ ಏಕೆ ಮಾಡಬೇಕು? ಇಲ್ಲಿದೆ ಕುತೂಹಲಕಾರಿ ಮಾಹಿತಿ

18/04/2026 8:44 AM

ಅಯ್ಯಪ್ಪ ಸ್ವಾಮಿಯ ನಿಜವಾದ ಕಥೆ! ಶಬರಿಮಲೆಯ ಈ ನಿಗೂಢ ಸತ್ಯಗಳು ನಿಮಗೆ ಗೊತ್ತೇ

18/04/2026 8:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.