ಬೆಂಗಳೂರು : ಇತ್ತೀಚಿಗೆ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಬಾರಿ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಅಲರ್ಟ್ ಆದ ಆರೋಗ್ಯ ಇಲಾಖೆ ಮೊಟ್ಟೆ ಟೆಸ್ಟ್ ಮಾಡಲು ಮುಂದಾಗಿದ್ದು, ಸಚಿವ ದಿನೇಶ್ ಗುಂಡೂರಾವ್ ವಿವಿಧ ಮಾದರಿ ಮೊಟ್ಟೆ ಟೆಸ್ಟ್ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಇದೀಗ ಮೊಟ್ಟೆ ಸ್ಯಾಂಪಲ್ ರಿಪೋರ್ಟ್ ಬಹಿರಂಗ ಆಗಿದ್ದು ವರದಿಯಲ್ಲಿ ಮೊಟ್ಟೆ ಸೇವನೆ ಸುರಕ್ಷಿತ ಎಂದು ತಿಳಿದುಬಂದಿದೆ. 27 ಮೊಟ್ಟೆಗಳ ಸ್ಯಾಂಪಲ್ ಟೆಸ್ಟಿಗೆ ಆರೋಗ್ಯ ಇಲಾಖೆ ಒಳಪಡಿಸಿತ್ತು. ಇದೀಗ ವರದಿಯಲ್ಲಿ ಮೊಟ್ಟೆ ಸೇವನೆ ಸುರಕ್ಷಿತ ಎಂದು ವರದಿ ಬಂದಿದೆ. ಸುಮಾರು 60 ಆಯಾಮಗಳಲ್ಲಿ ಮೊಟ್ಟೆ ಟೆಸ್ಟ್ ಮಾಡಲಾಗಿತ್ತು. ಸ್ಯಾಂಪಲ್ ಸಂಗ್ರಹಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಟೆಸ್ಟ್ ನಡೆಸಿತ್ತು.
ಬೆಂಗಳೂರು ಸೇರಿ ರಾಜ್ಯಾದ್ಯಂತ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು. ರಾಜ್ಯದಲ್ಲಿ 200 ಕ್ಕೂ ಹೆಚ್ಚು ಮೊಟ್ಟೆಗಳ ಸ್ಯಾಂಪಲ್ ಸಂಗ್ರಹಿಸಿದ್ದರು ರಾಜಧಾನಿ ಬೆಂಗಳೂರಿನಲ್ಲಿ 50 ಸ್ಯಾಂಪಲ್ ಕಲೆಕ್ಟ್ ಮಾಡಿದರು. ಇದರಲ್ಲಿ ಇಲಾಖೆಯ ಅಧಿಕಾರಿಗಳ ಕೈ ಸೇರಿದ ನಾಲ್ಕು ಮೊಟ್ಟೆಗಳ ವರದಿಯಲ್ಲಿ ಮೊಟ್ಟೆ ಸೇವನೆಯಿಂದ ಯಾವುದೇ ರೋಗ ಹರಡುವುದಿಲ್ಲ ಎಂದು ದೃಡಪಟ್ಟಿದೆ.







