ಬೆಂಗಳೂರು: ಇರಾನ್ ಇಸ್ರೇಲ್ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ ಈಗ ಪಾತಾಳಕ್ಕೆ ಕುಸಿಯುತ್ತಿದ್ದು, 1 ಲಕ್ಷ ರೂ. ಸನಿಹಕ್ಕೆ ಬರುವಹಾಗಿದೆ.
ಹೌದು. ವಾರ್ ಎಫೆಕ್ಟ್ (War Effect) ಗಗನಕ್ಕೇರಿದ ಚಿನ್ನ ಈಗ ಪಾತಾಳಕ್ಕೆ ಕುಸಿದಿದೆ. ಚಿನ್ನದ ದರ ಕುಸಿತವು ಹೆಂಗಳೆಯರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. 10 ಗ್ರಾಂ ಗೆ ಯುದ್ಧದ ಪರಿಣಾಮದಿಂದ 30 ಸಾವಿರ ರೂ. ವರೆಗೆ ಇದ್ದ 24 ಕ್ಯಾರೆಟ್ ಚಿನ್ನದ ದರ ಕೊಂಚ ಇಳಿಕೆ ಕಂಡಿದ್ದರೆ, 22 ಕ್ಯಾರೆಟ್ ಚಿನ್ನವೂ 25 ಸಾವಿರದಷ್ಟು ಇಳಿಕೆಯಾಗಿದೆ.
| ನಗರ | 22 ಕ್ಯಾರೆಟ್ (ಆಭರಣ ಚಿನ್ನ) | 24 ಕ್ಯಾರೆಟ್ (ಶುದ್ಧ ಚಿನ್ನ) |
| ಬೆಂಗಳೂರು | ₹ 1,28,650 | ₹ 1,40,350 |
| ಮೈಸೂರು | ₹ 1,28,650 | ₹ 1,40,350 |
| ಮಂಗಳೂರು | ₹ 1,28,700 | ₹ 1,40,400 |
| ಕಲಬುರಗಿ | ₹ 1,27,850 | ₹ 1,39,570 |
ಬೆಲೆ ಇಳಿಕೆಗೆ ಪ್ರಮುಖ ಕಾರಣಗಳು:
ಯುದ್ಧದ ಆತಂಕವಿದ್ದರೂ ಬೆಲೆ ಕುಸಿಯಲು ತಜ್ಞರು ಈ 3 ಪ್ರಮುಖ ಕಾರಣಗಳನ್ನು ನೀಡುತ್ತಿದ್ದಾರೆ:
-
ಡಾಲರ್ ಬಲವರ್ಧನೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಮೌಲ್ಯ ಹೆಚ್ಚಾಗುತ್ತಿರುವುದು ಚಿನ್ನದ ಬೆಲೆ ಇಳಿಕೆಗೆ ಮುಖ್ಯ ಕಾರಣ.
-
ಲಾಭಾಂಶ ವಸೂಲಿ (Profit Booking): ಚಿನ್ನದ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿದ್ದರಿಂದ, ದೊಡ್ಡ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂಪಡೆದು ಲಾಭ ಮಾಡಿಕೊಳ್ಳುತ್ತಿದ್ದಾರೆ.
-
ತೈಲ ಬೆಲೆ ಮತ್ತು ಹಣದುಬ್ಬರ: ಯುದ್ಧದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದು, ಇದು ಜಾಗತಿಕ ಹಣದುಬ್ಬರದ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಹೂಡಿಕೆದಾರರು ಲಿಕ್ವಿಡಿಟಿ (ನಗದು) ಗಾಗಿ ಚಿನ್ನವನ್ನು ಮಾರಾಟ ಮಾಡುತ್ತಿದ್ದಾರೆ.








