ನವದೆಹಲಿ : ಉಪಾಧ್ಯಕ್ಷ ಚುನಾವಣೆ: 2025 ರಲ್ಲಿ ನಡೆಯಲಿರುವ ಉಪಾಧ್ಯಕ್ಷ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ (ECI) ಸಿದ್ಧತೆಗಳನ್ನ ಪ್ರಾರಂಭಿಸಿದೆ. ದಾಖಲೆಗಳಿಗೆ ಸಂಬಂಧಿಸಿದ ಸಿದ್ಧತೆಗಳು ನಡೆಯುತ್ತಿವೆ ಎಂದು ಆಯೋಗವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಎಲ್ಲಾ ಚಟುವಟಿಕೆಗಳು ಪೂರ್ಣಗೊಂಡ ತಕ್ಷಣ, ಚುನಾವಣಾ ಆಯೋಗದಿಂದ ಅಧಿಸೂಚನೆ ಹೊರಡಿಸಲಾಗುವುದು.
Election Commission of India starts preparations relating to the Vice-Presidential Elections, 2025.
On completion of the preparatory activities, the announcement of the Election Schedule to the office of the Vice-President of India will follow as soon as possible, says Election… pic.twitter.com/44DUFeYC7F
— ANI (@ANI) July 23, 2025
ಧನ್ಕರ್ ಬಳಿಕ ಚುನಾವಣೆಗೆ ಸಿದ್ಧತೆ.!
ಚುನಾವಣಾ ಆಯೋಗದ ಪ್ರಕಾರ, ಉಪಾಧ್ಯಕ್ಷರ ಚುನಾವಣೆಗೆ ಅಗತ್ಯವಿರುವ ಎಲ್ಲಾ ಕಾರ್ಯವಿಧಾನಗಳು ಮತ್ತು ವ್ಯವಸ್ಥೆಗಳನ್ನ ಖಚಿತಪಡಿಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಜಗದೀಪ್ ಧನ್ಕರ್ ಅವರು ಅನಾರೋಗ್ಯದ ಕಾರಣಗಳನ್ನ ನೀಡಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಮಯದಲ್ಲಿ ಆಯೋಗದ ಈ ಹೇಳಿಕೆ ಬಂದಿದೆ.
ಮಂಗಳವಾರ ರಾಜೀನಾಮೆ ಅಂಗೀಕಾರ.!
ಜುಲೈ 21ರಂದು ನಡೆದ ಮಳೆಗಾಲದ ಅಧಿವೇಶನದ ಮೊದಲ ದಿನದ ಕಲಾಪ ಮುಗಿದ ಕೆಲವೇ ಗಂಟೆಗಳಲ್ಲಿ ಜಗದೀಪ್ ಧನ್ಕರ್ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದು 67(ಎ) ವಿಧಿಯನ್ನು ಉಲ್ಲೇಖಿಸಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಅವರು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಜುಲೈ 22ರ ಮಂಗಳವಾರದಂದು ರಾಷ್ಟ್ರಪತಿಗಳು ಅವರ ರಾಜೀನಾಮೆಯನ್ನ ಅಂಗೀಕರಿಸಿದರು.
BREAKING : ಜುಲೈ 29ರಂದು ರಾಜ್ಯಸಭೆಯಲ್ಲಿ ‘ಆಪರೇಷನ್ ಸಿಂದೂರ್’ ಚರ್ಚೆ, 16 ಗಂಟೆ ನಿಗದಿ ; ‘ಪ್ರಧಾನಿ ಮೋದಿ’ ಹಾಜರ್
BREAKING : 1,654 ಕೋಟಿ ರೂಪಾಯಿ ‘FDI’ ಉಲ್ಲಂಘನೆ ; ಇ-ಕಾಮರ್ಸ್ ಕಂಪನಿ ‘ಮಿಂತ್ರಾ’ ವಿರುದ್ಧ ‘ED’ ಪ್ರಕರಣ ದಾಖಲು
ಹೊಸ ‘ಕ್ರೀಡಾ ಆಡಳಿತ ಮಸೂದೆ’ ವ್ಯಾಪ್ತಿಗೆ ಬರುವ ಕುರಿತು ‘BCCI’ ಮೊದಲ ಪ್ರತಿಕ್ರಿಯೆ ; ಹೇಳಿದ್ದೇನು ಗೊತ್ತಾ?