ವಿಜಯಪುರ : ವಿಜಯಪುರ ಜಿಲ್ಲೆಯ ಹಲವೆಡೆ ಇಂದು ಭೂಮಿ ಕಂಪಿಸಿದ ಅನುಭವವಾಗಿದ್ದು, ನಿಗೂಢ ಶಬ್ದಕ್ಕೆ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ.
ಹೌದು, ಇಂದು ಮಧ್ಯಾಹ್ನ . ವಿಜಯಪುರ ನಗರದ ಕೆಲ ಭಾಗ ಸೇರಿದಂತೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಗೋಣಸಗಿ, ಹಡಗಿನಾಳ ಸೇರಿದಂತೆ ಹಲವೆಡೆ ಭಾರಿ ಶಬ್ದ ಕೇಳಿಬಂದಿದೆ ಭೂಮಿಯೊಳಗಿನಿಂದ ಭಾರಿ ಸದ್ದು ಕೇಳಿಸಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ವಿಜಯಪುರದ ಕೆ.ಹೆಚ್.ಬಿ ಕಾಲೋನಿ, ಬ್ಯಾಂಕರ್ಸ್ ಕಾಲೋನಿ, ಸದಾಶಿವನಗರ, ಆಕೃತಿ ಕಾಲೋನಿ ಜನರಿಗೂ ಭಯಂಕರವಾದ ಶಬ್ದ ಕೇಳಿದ್ದು, ಭೂಕಂಪನದ ಅನುಭವ ಕೂಡ ಆಗಿದೆ. ಭೂಮಿಯಾಳದ ನಿಗೂಧ ಸದ್ದಿನ ಬಗ್ಗೆ ಇನ್ನಷ್ಟೇ ಅಧಿಕಾರಿಗಳು ಮಾಹಿತಿ ನೀಡಬೇಕಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.