ಹಾಸನ : ಹಾಸನದ 3 ಖಾಸಗಿ ಶಾಲಾ ಕಾಲೇಜಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಹಾಸನದ ಮೂರು ಶಾಲೆಗಳಿಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಇ-ಮೇಲ್ ಬೆದರಿಕೆ ಸಂದೇಶ ಬಂದಿದೆ. ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್ ಗೆ ಇಮೇಲ್ ಸಂದೇಶ ಬಂದಿದೆ.
ಹಾಸನದ ವಿಜಯನಗರ, ಇಂಡಸ್ಟ್ರಿಯಲ್ ಏರಿಯಾ ಮತ್ತು ಕೆ ಆರ್ ಪುರಂ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಒಂದು ಗಂಟೆಗೆ ಕಟ್ಟಡ ಸ್ಪೋಟಿಸುವುದಾಗಿ ದುಷ್ಕರ್ಮಿಯೋಬ್ಬ ಇ-ಮೇಲ್ ಸಂದೇಶ ಕಳುಹಿಸಿದ್ದಾನೆ. ವಿದ್ಯಾಸೌಧ ಶಾಲೆ ಹಾಗು ಕಿಡ್ಸ್ ಶಾಲೆ ಮಂಜೇಗೌಡ ಎಂಬವರಿಗೆ ಸೇರಿದೆ. ಹಾಸನ ನಗರ ಗ್ರಾಮಾಂತರ ಠಾಣೆಗೆ ಇದೀಗ ಪ್ರಾಂಶುಪಾಲರು ಈ ಕುರಿತು ದೂರು ನೀಡಿದ್ದಾರೆ. ತಡರಾತ್ರಿಯೆ ಪೊಲೀಸರು ಮತ್ತು ಬಾಂಬಬ್ ನಿಷ್ಕ್ರಿಯದಳ ಪರಿಶೀಲನೆ ನಡೆಸಿದ್ದಾರೆ.