ಬೆಂಗಳೂರು : ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರಾಗಿರುವ ಡಿವಿ ಸದಾನಂದ ಗೌಡಗೆ ಈ ಬಾರಿ ಲೋಕಸಭಾ ಟಿಕೆಟ್ ಮಿಸ್ ಆಗಿದೆ ಈ ಕುರಿತಂತೆ ಬಿಜೆಪಿ ಹೈಕಮಾಂಡ್ ಸ್ವತಹ ದೂರವಾಣಿ ಕರೆ ಮಾಡಿ ಸದಾನಂದ ಗೌಡಗೆ ಟಿಕೆಟ್ ಮಿಸ್ ಆಗಿರುವ ಕುರಿತಂತೆ ಖಚಿತಪಡಿಸಿದೆ.
BREAKING: ನೂತನ ಚುನಾವಣಾ ಆಯುಕ್ತರಾಗಿ ರಾಜೇಶ್ ಕುಮಾರ್ ಗುಪ್ತಾ, ಪ್ರಿಯಾಂಶ್ ಶರ್ಮಾ ನೇಮಕ!
ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿರುವ ಸದಾನಂದ ಗೌಡ ಅವರಿಗೆ ದೂರವಾಣಿ ಕರೆ ಮೂಲಕ ಬಿಜೆಪಿ ಹೈಕಮಾಂಡ್ ಮಾಹಿತಿಯನ್ನು ರವಾನಿಸಿದೆ ಎನ್ನಲಾಗುತ್ತಿದೆ. ಅಭ್ಯರ್ಥಿ ಬದಲಾವಣೆ ಮಾಡುವ ಬಗ್ಗೆ ಹೈಕಮಾಂಡ್ ಸದಾನಂದ ಗೌಡರಿಗೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಮಾರ್ಚ್ 15 ರೊಳಗೆ ಮತ್ತೊಂದು ಬ್ಯಾಂಕಿನಿಂದ ಹೊಸ ಫಾಸ್ಟ್ಟ್ಯಾಗ್ ಖರೀದಿಸಿ, ಕೇಂದ್ರ ಸರ್ಕಾರ ಸೂಚನೆ!
ಡಿವಿ ಸದಾನಂದ ಗೌಡರಿಗೆ ಕರೆ ಮಾಡಿ ಬಿಜೆಪಿ ಹೈಕಮಾಂಡ್ ಟಿಕೆಟ್ ಮಿಸ್ ಆಗಿರುವ ಕುರಿತಂತೆ ಮಾಹಿತಿ ನೀಡಿದೆ.ಹಾಲಿ ಸಂಸದ ಡಿ ಸದಾನಂದ ಗೌಡಗೆ ಬಿಜೆಪಿ ಟಿಕೆಟ್ ಮೇಸ್ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರಾಗಿ ಡಿವಿ ಸದಾನಂದ ಗೌಡ. 2014 ಹಾಗೂ 2019 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.
ಹೊರಗುತ್ತಿಗೆ/ಗುತ್ತಿಗೆ ಸಿಬ್ಬಂದಿಗೆ ಗುಡ್ನ್ಯೂಸ್: 5ನೇ ಕಂತಿನ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ
ಈ ಕುರಿತಂತೆ ಟ್ವೀಟ್ ನಲ್ಲಿ ಅವರು ಕೂಡ ಕ್ಷೇತ್ರದ ಜನತೆಗೆ ಧನ್ಯವಾದಗಳು ತಿಳಿಸಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ, ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದವನ್ನು ಮಾಡಿದ್ದೀರಿ.
ನಾನು ನನ್ನ ಶಕ್ತಿಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಚಿರಋಣಿ. ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು .ಇಂತಿ ನಿಮ್ಮವನೇ ಆದ ಡಿ.ವಿ. ಸದಾನಂದ ಗೌಡ ಎಂದು ಧನ್ಯವಾದ ತಿಳಿಸಿದ್ದಾರೆ.
— Sadananda Gowda ( Modi Ka Parivar ) (@DVSadanandGowda) March 13, 2024